HomeTallyPrimeWhat's New | Release NotesRelease 2.1 - ಕನ್ನಡ

 

Explore Categories

 

 PDF

TallyPrime Release 2.1 ಮತ್ತು TallyPrime Edit Log Release 2.1 ರಿಲೀಸ್ ನೋಟ್ಸ್ | ಹೊಸದೇನಿದೆ ತಿಳಿಯಿರಿ

TallyPrime ಜೊತೆಗಿನ ಪ್ರಯಾಣವನ್ನು ಅತ್ಯುತ್ತಮಗೊಳಿಸಲು ಎಡಿಟ್ ಲಾಗ್ ಎಂಬ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇದು, ನಿಮ್ಮ ಮಾಸ್ಟರ್‌ ಮತ್ತು ವಹಿವಾಟುಗಳ ಪ್ರತಿಯೊಂದು ಚಟುವಟಿಕೆಗಳನ್ನು ದಾಖಲು ಮಾಡಿ, ಕಂಪನಿ ಡೇಟಾವನ್ನು ನಿಯಂತ್ರಣದಲ್ಲಿಡುತ್ತದೆ.

Release 2.1 ನಲ್ಲಿ ಈ ಕೆಳಗಿನ ಪ್ರಾಡಕ್ಟ್ ಗಳಲ್ಲಿ ನಿಮಗೆ ಬೇಕಾದದನ್ನು ಆಯ್ಕೆ ಮಾಡಿಕೊಳ್ಳಬಹುದು

  • TallyPrime Edit Log : ನಿಮ್ಮ ವಿತ್ತೀಯ ನಿಯಂತ್ರಣಕ್ಕಾಗಿ ಎಲ್ಲಾ ಚಟುವಟಿಕೆಗಳನ್ನು ದಾಖಲು ಮಾಡಲು ಬಯಸಿದಲ್ಲಿ ಅಥವಾ April 1, 2022 ರಿಂದ Ministry of Corporate Affairs (MCA) India ಖಡ್ಡಾಯಗೊಳಿಸಿದಂತೆ, ಶಾಸನಬದ್ಧ ಆಡಿಟ್ ಟ್ರೈಲ್ ಅಗತ್ಯಕ್ಕಾಗಿ ಈ ಪ್ರಾಡಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಎಡಿಟ್ ಲಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ.
  • TallyPrime: ನಿಮ್ಮ ಆಂತರಿಕ ಲೆಕ್ಕಪರಿಶೋಧನೆಯನ್ನು ನಿರ್ವಹಿಸಲು ಅಥವಾ ವಹಿವಾಟು ಮತ್ತು ಮಾಸ್ಟರ್ ಗಳ  ದಾಖಲಾತಿ ಚಟುವಟಿಕೆಗಳ ಆಂತರಿಕ ವರದಿ ಬಯಸಿದ್ದಲ್ಲಿ ಎಡಿಟ್ ಲಾಗ್ ಅನ್ನು ದೈನಂದಿನ  ವ್ಯವಹಾರದಲ್ಲಿ ಬಳಸಬಹುದಾಗಿದೆ 

ಪೂರ್ವನಿಯೋಜಿತವಾಗಿ, TallyPrime ನಿಮ್ಮ ವಹಿವಾಟು ಮತ್ತು ಮಾಸ್ಟರ್‌ ಗಳ  ಚಟುವಟಿಕೆ ಮತ್ತು ಮಾರ್ಪಾಡುಗಳನ್ನು ಟ್ರ್ಯಾಕ್ ಮಾಡುವುದಿಲ್ಲ. ಅವಶ್ಯವಿದ್ದಲ್ಲಿ ನೀವು ಎಡಿಟ್ ಲಾಗ್ ಸೌಲಭ್ಯವನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದಾಗಿದೆ 

ಇದರ ಜೊತೆಗೆ, ಡಿಜಿಟಲ್ ಸಹಿ ಸೌಲಭ್ಯವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಸುಲಲಿತವಾಗಿ ಡಿಜಿಟಲ್ ಸಹಿ ಮಾಡಲು ಮತ್ತು ದೃಢೀಕರಿಸಲು ಸಹಾಯ ಮಾಡುತ್ತದೆ. ತದನಂತರ,  ಅವಶ್ಯವಿರುವವರೊಂದಿಗೆ ಸುರಕ್ಷಿತವಾಗಿ ಹಂಚಿಕೊಳ್ಳಬಹುದು

ಮುಖ್ಯಾಂಶಗಳು – TallyPrime ಮತ್ತು TallyPrime Edit Log Release 2.1

ಎಡಿಟ್ ಲಾಗ್ ಪರಿಚಯ

TallyPrime ನಲ್ಲಿನ ಎಡಿಟ್ ಲಾಗ್, ನಿಮ್ಮ ವಿತ್ತೀಯ ಡೇಟಾದಲ್ಲಿನ ವಹಿವಾಟು ಹಾಗು ಮಾಸ್ಟರ್‌ಗಳಲ್ಲಿನ ಚಟುವಟಿಕೆ ಮತ್ತು ಮಾರ್ಪಾಡುಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪ್ರಸ್ತುತ ಆಗುಹೋಗುಗಳ ಬಗ್ಗೆ ತಿಳಿಯಬಹುದು 

TallyPrime ನಲ್ಲಿ ಎಡಿಟ್ ಲಾಗ್ ನೊಂದಿಗೆ, ನೀವು:

  • ಈ ಕೆಳಗಿನವುಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ 
    • ವಹಿವಾಟುಗಳು : ಎಲ್ಲಾ ತರಹದ ವೋಚರ್‌ಗಳು
    • ಮಾಸ್ಟರ್ ಗಳು : ಸ್ಟಾಕ್ ಐಟಂಗಳು, ಲೆಡ್ಜರ್‌ಗಳು ಮತ್ತು ಅಕೌಂಟಿಂಗ್ ಗ್ರೂಪ್.
    • ಕಂಪನಿ ಡೇಟಾ: ಮೈಗ್ರೇಶನ್, ರಿಪೇರ್, ಇಂಪೋರ್ಟ್, ಸ್ಪ್ಲಿಟ್ ಮತ್ತು ಇತ್ಯಾದಿ.
  • ಎಡಿಟ್ ಲಾಗ್ ಸ್ಕ್ರೀನ್‌ನಲ್ಲಿ ಈ ಕೆಳಗಿನ ಅಂಶಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ 
    • ವರ್ಷನ್ ನಂಬರ್: ನಿರ್ದಿಷ್ಟ ವಹಿವಾಟು ಅಥವಾ ಮಾಸ್ಟರ್‌ ನಲ್ಲಿ ರಚಿಸಲಾದ ಲಾಗ್‌ಗಳ ಸಂಖ್ಯೆ  
    • ಚಟುವಟಿಕೆಯ ಸ್ವರೂಪ : ಉದಾಹರಣೆಗೆ ಕ್ರಿಯೇಷನ್, ಅಲ್ಟರೇಷನ್ ಮತ್ತು ಡಿಲೀಷನ್
    • ಚಟುವಟಿಕೆ ನಿರ್ವಹಿಸಿದ ಬಳಕೆದಾರನ (user) ವಿವರ 
    • ಚಟುವಟಿಕೆ ನಿರ್ವಹಿಸಿದ ದಿನಾಂಕ ಮತ್ತು ಸಮಯ 
  • ಹಿಂದಿನ ವರ್ಷನ್ ನೊಂದಿಗೆ ವಿವರಗಳನ್ನು ಡ್ರಿಲ್ ಡೌನ್ ಮೂಲಕ ಹೋಲಿಕೆ ಮಾಡಬಹುದು

ಜೊತೆಗೆ, ವಿವಿಧ ರೀತಿಯ ಮೌಲ್ಯಧಾರಿತ ವಿವರಗಳನ್ನು ಕಾನ್ಫಿಗರ್ ಮಾಡುವ ಮೂಲಕ  ಹೋಲಿಸಬಹುದಾಗಿದೆ  ಉದಾಹರಣೆಗೆ, ಮಾರ್ಪಡಿಸಿದ ಮೌಲ್ಯಗಳು ಅಥವಾ ಕಾನ್ಫಿಗರೇಶನ್ ಆಧಾರಿತ ಮೌಲ್ಯಗಳು.  

  • ಮಾರ್ಪಡಿಸಿದ ಮತ್ತು ಡಿಲೀಟ್ ಮಾಡಲಾದ :
    • ವೌಚರ್ ಗಳನ್ನು ಡೇ ಬುಕ್‌ ಮತ್ತು ಲೆಡ್ಜರ್ ವೋಚರ್‌ ರಿಪೋರ್ಟ್ ಗಳಲ್ಲಿ ನೋಡಬಹುದು 
    • ಮಾಸ್ಟರ್ ಗಳನ್ನು ಚಾರ್ಟ್ ಆಫ್ ಅಕೌಂಟ್ ನಲ್ಲಿ ನೋಡಬಹುದು
  • ರಿಪೋರ್ಟ್ ವ್ಯೂ ಗಳನ್ನೂ ಹಾಗೆಯೇ ಉಳಿಸಿಕೊಂಡು ಸುಲಭವಾಗಿ ಡೇಟಾ ಮೈಗ್ರೇಟ್ ಮಾಡಬಹುದು 

ಇಷ್ಟೇ ಅಲ್ಲ ಇದರ ಜೊತೆ! 

ಎಡಿಟ್ ಲಾಗ್ ಅಗತ್ಯತೆಯ ಆಧಾರದ ಮೇಲೆ, ಈ ಕೆಳಗಿನ ಪ್ರಾಡಕ್ಟ್ ಗಳಲ್ಲಿ ನಿಮಗೆ ಬೇಕಾದದನ್ನು ಆಯ್ಕೆ ಮಾಡಿಕೊಳ್ಳಬಹುದು

  • TallyPrime Edit Log Release 2.1: ನೀವು ಎಡಿಟ್ ಲಾಗ್ ಸೌಲಭ್ಯವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗದ ಕಾರಣ, all the compliance requirements of Audit Trail ಕಂಪನಿಯು ಅನುಸರಿಸುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ.
  • TallyPrime 2.1: ನಿಮ್ಮ ಕಂಪನಿಗೆ ಎಡಿಟ್ ಲಾಗ್ ಅಗತ್ಯವಿದ್ದಲ್ಲಿ ಸಕ್ರಿಯಗೊಳಿಸಬಹುದು ಮತ್ತು ಪ್ರಮುಖ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು. ವೋಚರ್‌ ಮತ್ತು ಮಾಸ್ಟರ್‌ಗಳ ಮಾರ್ಪಡಿಸುವಿಕೆ ಮತ್ತು ಅಳಿಸುವಿಕೆಯಂತಹ ಚಟುವಟಿಕೆಗಳ ಬಗ್ಗೆ ನಿಯಂತ್ರಣವನ್ನು ಹೊಂದಿರುವಿರಿ

TallyPrime Release 2.1: ಹೆಚ್ಚಿನ ಮಾಹಿತಿಗಾಗಿ Edit Log in TallyPrime  ವಿಭಾಗವನ್ನು ನೋಡಿ.

PDF ದಾಖಲೆಗಳಲ್ಲಿ 

TallyPrime Edit Log Release 2.1 ಮತ್ತು TallyPrime Release 2.1 ಡಾಂಗಲ್ ಆಧಾರಿತ ಡಿಜಿಟಲ್ ಸಹಿಯನ್ನು ಸೇರ್ಪಡಿಸುವ ಸೌಲಭ್ಯವನ್ನು ಹೊಂದಿದೆ

ನೀವು ಈ ಕೆಳಗಿನ ಚಟುವಟಿಕೆಗಳನ್ನು ಮಾಡುವಾಗ ಸುಲಭವಾಗಿ ವೋಚರ್‌ ಮತ್ತು ರಿಪೋರ್ಟ್ ಗಳಲ್ಲಿ ಡಿಜಿಟಲ್ ಸಹಿಯನ್ನು ಸೇರ್ಪಡಿಸಬಹುದು

  • ದಾಖಲೆಗಳನ್ನು PDF ಆಗಿ ಎಕ್ಸ್ಪೋರ್ಟ್ ಮಾಡುವಾಗ 
  • PDF ದಾಖಲೆಗಳನ್ನು ಇಮೇಲ್ ಮಾಡುವಾಗ 
  • ಪ್ರಿಂಟಿಂಗ್ ಸಮಯದಲ್ಲಿ ಡಾಕ್ಯುಮೆಂಟ್‌ಗಳನ್ನು PDF ಆಗಿ ಸೇವ್ ಮಾಡುವಾಗ.

ಇದಲ್ಲದೆ, ನೀವು ಮಲ್ಟಿ-ವೌಚರ್ ರಿಪೋರ್ಟ್ ನಲ್ಲಿ ಡಿಜಿಟಲ್ ಸಹಿಯನ್ನು ಸೇರ್ಪಡಿಸಬಹುದಾಗಿದೆ, ಇದರಿಂದ ಎಲ್ಲಾ ವೋಚರ್‌ಗಳಲ್ಲಿ ಡಿಜಿಟಲ್ ಸಹಿ ಸೇರ್ಪಡೆಯಾಗಿರುತ್ತದೆ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು

ಡಿಜಿಟಲ್ ಸಹಿಯು PDF ದಾಖಲೆಗಳ ದೃಢೀಕರಣ ಮತ್ತು ಸಮಗ್ರತೆಯನ್ನು ಖಾತರಿಪಡಿಸುತ್ತದೆ ಹಾಗೂ ಅವಶ್ಯವಿರುವವರಿಗೆ –  ಗ್ರಾಹಕರು, ಲೆಕ್ಕಪರಿಶೋಧಕರು, ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ.
ದಾಖಲೆಗಳಲ್ಲಿ ಯಾವುದೇ ರೀತಿಯ ತಿದ್ದುಪಡಿಯಾಗಿದ್ದಲ್ಲಿ ಅಥವಾ ವಿರೂಪಗೊಂಡಿದಲ್ಲಿ ಸಹಿಯು ಮಾನ್ಯವಾಗಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ Digital Signature in TallyPrime for PDF Documents ವಿಭಾಗವನ್ನು ನೋಡಿ.

ಇಷ್ಟೇ ಅಲ್ಲ ಇದರ ಜೊತೆ!

ನೀವು ಮಲ್ಟಿ-ವೌಚರ್ ರಿಪೋರ್ಟ್ಸ ಗಳನ್ನು ನಿರ್ದಿಷ್ಟ ಪಾರ್ಟಿ ಹಾಗು ಅವಧಿಗೆ ಪ್ರಿಂಟ್, ಎಕ್ಸ್ಪೋರ್ಟ್ ಅಥವಾ ಇಮೇಲ್ ಸಹ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ Multi-Voucher/Invoice for a selected party ವಿಭಾಗವನ್ನು ನೋಡಿ.

TallyHelpwhatsAppbanner
Is this information useful?
YesNo
Helpful?