HomeTallyPrimeWhat's New | Release NotesRelease 3.0 - ಕನ್ನಡ

 

Explore Categories

 

 PDF

TallyPrime ಮತ್ತು TallyPrime Edit Log Release 3.0 ನ Release Notes ! ಹೊಸದೇನಿದೆ 

Report ಫಿಲ್ಟರ್ ಅನ್ನು ಬಳಸಿ ಸುಲಭವಾದ data analysis, ನಿಮ್ಮ ಗ್ರಾಹಕರಿಗೆ payment requestಗಳನ್ನು ಕಳುಹಿಸುವ ಸೌಲಭ್ಯ ಮತ್ತು ಉತ್ತಮ data management ಅನುಭವದೊಂದಿಗೆ, TallyPrime Release 3.0 ನಿಮಗೆ ಉಪಯುಕ್ತ ವೈಶಿಷ್ಟ್ಯಗಳನ್ನು ತರುತ್ತಿದೆ. ಅಷ್ಟೆ ಅಲ್ಲ, GST ಗಾಗಿ ವರ್ಧಿತ ವೈಶಿಷ್ಟ್ಯಗಳೊಂದಿಗೆ, GSTR-1, GSTR-2A ಮತ್ತು GSTR-2B reconciliation ಗಾಗಿ ಸುಲಭವಾದ ಅನುಭವವನ್ನು ಒಳಗೊಂಡಂತೆ, ನಮ್ಮ product ನಿಮಗೆ ಎಲ್ಲಾ ರೀತಿಯಲ್ಲೂ ಸರಳತೆ ಮತ್ತು ಸಂತೋಷವನ್ನು ನೀಡುತ್ತದೆ.

ಜೊತೆಗೆ, Finance Budget 2023-24 ರ ಪ್ರಕಾರ Income Tax Computation report ಅನ್ನು ಇತ್ತೀಚಿನ income tax slab rates ಗಳೊಂದಿಗೆ ನವೀಕರಿಸಲಾಗಿದೆ.

GST

TallyPrime ಮತ್ತು TallyPrime Edit Log Release 3.0 ನಿಮ್ಮ GST ಅನುಭವವನ್ನು ಸಂತೋಷಕರ ಮತ್ತು ಆರಾಮವಾಗಿರುವಂತೆ ಮಾಡುತ್ತದೆ  

ಈಗ product ನಲ್ಲಿ ಒಂದೇ ಕಂಪನಿಯಲ್ಲಿ ಹಲವಾರು GST registration ಗಳನ್ನು ನಿರ್ವಹಿಸಬಹುದಾಗಿದೆ. ಇದರಲ್ಲಿ ನೀವು ಆಯಾ GST registration ಗಳಿಗೆ ಅನುಗುಣವಾಗಿ  ವಹಿವಾಟುಗಳನ್ನು ದಾಖಲಿಸಬಹುದಾಗಿದೆ ಮತ್ತು ವರದಿಗಳನ್ನು ಒಂದು ನಿರ್ದಿಷ್ಟ GST registration ಗೆ ಅಥವಾ ಎಲ್ಲ GST registration ಗಳಿಗೆ ನೋಡಬಹುದಾಗಿದೆ. ಇದು ಎಲ್ಲಾ ವಹಿವಾಟುಗಳಲ್ಲಿ ಸ್ವಯಂ tax liability ಲೆಕ್ಕಾಚಾರ ಮತ್ತು tax analysis ನ  ಸುಧಾರಿತ ಅನುಭವವನ್ನು ನೀಡುವುದರ ಮೂಲಕ GST ವಹಿವಾಟುಗಳನ್ನು ದಾಖಲು ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ

Master ಗಳಲ್ಲಿ GST Rate ಮತ್ತು HSN/SAC ವಿವರಗಳನ್ನು  ಪ್ರತ್ಯೇಕವಾಗಿ ನಮೂದಿಸುವಂತಹ  ಸೌಲಭ್ಯವು ಹಾಗೂ ಮೌಲ್ಯಗಳನ್ನು ಅತಿಕ್ರಮಿಸುವಂತಹ ಸುಲಭ ಅನುಭವವು GST ವಹಿವಾಟುಗಳನ್ನು ದಾಖಲು ಮಾಡುವುದನ್ನು ಮತ್ತಷ್ಟು ಸರಳಗೊಳಿಸಿದೆ 

ನಿಮ್ಮ GST ಸಲ್ಲಿಕೆ ವರದಿಗಳು ವಹಿವಾಟುಗಳಲ್ಲಿನ ಮೌಲ್ಯಗಳ ಆಧಾರದ ಮೇಲೆ update ಆಗುವಂತೆ product ಕಾಳಜಿವಹಿಸುತ್ತದೆ. Tax Liability ಅನ್ನು ಹೆಚ್ಚಿಸಲು ಹಾಗೂ Input Tax Credit ಅನ್ನು claim ಮಾಡಲು Journal voucher ಗಳನ್ನು create ಮಾಡುವ ಅವಶ್ಯಕತೆ ಇರುವುದಿಲ್ಲ. ಆದಾಗ್ಯೂ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರು ಆಯ್ಕೆಯನ್ನು ಮಾಡಬಹುದಾಗಿದೆ.

ಇದಲ್ಲದೆ ನೀವು GSTR-2A ವಹಿವಾಟುಗಳನ್ನು ಸುಲಲಿತವಾಗಿ reconcile ಮಾಡಬಹುದಾಗಿದೆ. GST ವಿವರಗಳು ಹೊಂದಾಣಿಕೆಯಾಗದಿರುವ ಸಂದರ್ಭದಲ್ಲಿ, GST ಸಂಬಂದಿತ data ಅನ್ನು  reset ಮಾಡುವ ಸೌಲಭ್ಯವು GST portal ನಿಂದ reconciliation ಗೆ import ಮಾಡಲಾದ GST data ವನ್ನು ಅಳಿಸುತ್ತದೆ ನಂತರ ನೀವು ಮೌಲ್ಯಗಳನ್ನು ಮತ್ತೆ ನಮೂದಿಸಿ GST portal ವಿವರಗಳೊಂದಿಗೆ ಹೊಂದಾಣಿಕೆ ಮಾಡಬಹುದು ಹಾಗೂ  portal data import ಮಾಡಿ  ವಹಿವಾಟುಗಳನ್ನು reconcile ಮಾಡಬಹುದು 

Payment Request

ಈಗ TallyPrime ನಲ್ಲಿ Payment Request ಸೌಲಭ್ಯದೊಂದಿಗೆ ಲಭ್ಯವಿದೆ. ಇದು payment link ಮತ್ತು QR codes (Payment Gateway or UPI) ಗಳನ್ನು ಬಳಸಿಕೊಂಡು ಸುಲಲಿತವಾಗಿ generate ಮಾಡಿ ಮತ್ತು ಹಂಚಿಕೊಳ್ಲಲು ಸಹಾಯ ಮಾಡುತ್ತದೆ. ಈ ಸೌಲಭ್ಯವು ಪಾರ್ಟಿಯು, ನಿಮ್ಮ ಪಾವತಿಯನ್ನು ತ್ವರಿತವಾಗಿ ಮತ್ತು ಸುಲಲಿತವಾಗಿ ಪಾವತಿಸಲು  ಅನುಕೂಲ ಮಾಡುತ್ತದೆ .

Data Exchange and Data Management

ಇದರ ಜೊತೆಗೆ ವಹಿವಾಟುಗಳ export ಮತ್ತು import ಅನ್ನು ಒಂದು ನಿರ್ದಿಷ್ಟ ಅಥವಾ ಎಲ್ಲಾ  GST registration ಗಳ data ವಿನಿಮಯವನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ಮಾಡಬಹುದಾಗಿದೆ 

ಹೊಚ್ಚ ಹೊಸ report filter ನಂತಹ ಸೌಕರ್ಯದ ಸಹಾಯದಿಂದ ವರದಿಗಳಲ್ಲಿ ಈಗ ನಿಮಗೆ ಬೇಕಾದ ವಿವರಗಳನ್ನು ತ್ವರಿತವಾಗಿ ಪಡೆಯಬಹುದಾಗಿದೆ  ಮತ್ತು ನಿಮ್ಮ business data ವನ್ನು ಇನ್ನೂ ಹೆಚ್ಚಿನ ವೇಗದೊಂದಿಗೆ ವಿಶ್ಲೇಷಣೆ ಮಾಡಬಹುದಾಗಿದೆ ಹಾಗೂ ಈ ಎಲ್ಲಾ ವಿವರಗಳು ಕೆಲವೇ ಕ್ಲಿಕ್ ಗಳ ಸಹಾಯದಿಂದ  ನಿಮ್ಮ ಬೆರಳಿನ ತುದಿಯಲ್ಲಿಯೇ ಪಡೆಯಬಹುದಾಗಿದೆ 

Data management ಚಟುವಟಿಕೆಗಳಾದ migration, repair ಮತ್ತು import ಗಳನ್ನು ಮತ್ತಷ್ಟು  ಸುಗಮಗೊಳಿಸಲಾಗಿದೆ. ಪ್ರಕ್ರಿಯೆಯ ಪ್ರತಿಯೊಂದು ಘಟ್ಟಗಳ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ, ಸಾರಾಂಶ ವರದಿಯು master ಗಳ ಮತ್ತು ವಹಿವಾಟುಗಳ ವಿವರವನ್ನು ಪ್ರಕ್ರಿಯೆಯ ಆರಂಭಕ್ಕೆ ಮುಂಚಿನ ಮತ್ತು ಪ್ರಕ್ರಿಯೆ ಪೂರ್ಣವಾದ ನಂತರದ  ವಿವರಗಳನ್ನು ಪಡೆಯಬಹುದು 

ನೀವು TallyPrime Edit Log ಬಳಕೆದಾರರಾಗಿದ್ದಲ್ಲಿ, TallyPrime Edit Log Release 3.0 ಅನ್ನು download ಮಾಡಿಕೊಳ್ಳಬಹುದಾಗಿದೆ 

ಮುಖ್ಯಾಂಶಗಳು – TallyPrime ಮತ್ತು TallyPrime Edit Release 3.0

ಒಂದೇ ಕಂಪನಿಯಲ್ಲಿ ಹಲವಾರು GST Registration ಗಳು 

ಒಂದೇ ಕಂಪನಿಯಲ್ಲಿ ಹಲವಾರು GST Registration ಗಳು GST ಸಲ್ಲಿಕೆಗಳ ಅನುಭವವನ್ನು  ಸರಳಗೊಳಿಸಿದೆ. ನೀವು GST ಸಲ್ಲಿಕೆಗಳನ್ನು ಪ್ರತಿಯೊಂದು GST registration ಗೆ ಪ್ರತ್ಯೇಕವಾಗಿ  GST ವರದಿಗಳೊಂದಿಗೆ  ಒಂದೇ ಕಂಪನಿಯಲ್ಲಿ ಮಾಡಬಹುದಾಗಿದೆ. ಹಲವಾರು GST registration ಗಳಿಗೆ ಹಲವಾರು ಕಂಪನಿ data ವನ್ನು ನಿರ್ವಹಿಸುವ ತೊಂದರೆಯನ್ನು ತಪ್ಪಿಸುತ್ತದೆ. ಇದರ ಪ್ರತಿಯಾಗಿ ನೀವು ಒಂದೇ ಕಂಪನಿಯಲ್ಲಿ ಪ್ರತಿಯೊಂದು GST registration ಗಳೊಂದಿಗೆ  GST ಸಲ್ಲಿಕೆಗಳನ್ನು ನಿರ್ವಹಿಸುವುದರಿಂದ ಸಮಯವನ್ನು ಉಳಿಸಬಹುದಾಗಿದೆ.

ಎಲ್ಲಾ GST registration ಗಳನ್ನು ಒಂದೇ ಕಂಪನಿಯಲ್ಲಿ ನಿರ್ವಹಿಸುವ ಸೌಕರ್ಯದಿಂದ ನೀವು  ಈಗ 

  •  ಕಂಪನಿಯಲ್ಲಿ GST registration ಗಳ create ಮಾಡಿ ಅದರ  ಜೊತೆಗೆ 
    • ಎಲ್ಲಾ GST registration ವಿವರಗಳನ್ನು ಉದಾಹರಣೆಗೆ ರಾಜ್ಯ, ವಿವಿಧ ವಿಳಾಸಗಳು, Registration ವಿಧ ಮತ್ತು  GSTIN/UNI ಗಳನ್ನು ನಿಗದಿಪಡಿಸಬಹುದು 
    • Return ಸಲ್ಲಿಕೆಯ ಅವಧಿ 
    • Place of Supply
    • e-Invoice ಮತ್ತು e-Way Bill ಅನ್ವಯಿಸುವಿಕೆ
    • Reconciliation configuration ವಿವರಗಳು
    • ಅನ್ವಯಿಸುವ LUT/Bond ವಿವರಗಳು
    • GST registration ಗೆ ಸಂಬಂಧಿಸಿದ ಇತರೆ ವಿವರಗಳು
  • ವಹಿವಾಟುಗಳನ್ನು ಈ ಕೆಳಗಿನವುಗಳಂತೆ ದಾಖಲಿಸುವಿಕೆ 
    • ನಿರ್ದಿಷ್ಟ GST Registration ಗೆ ಅನ್ವಯಿಸುವ GST ನಿಯಮಗಳು 
    • GST registration ಗಳಿಗೆ ಒದಗಿಸಲಾದ GSTIN/UNI ಮತ್ತು ವಿಳಾಸ ಮಾಹಿತಿಗಳು 
  • ವೌಚೆರ್ ಸಂಖ್ಯೆ ಸಂಘರ್ಷವನ್ನು ತಪ್ಪಿಸಲು ಪ್ರತಿಯೊಂದು GST registration ಗೆ ವೌಚೆರ್ ಸಂಖ್ಯೆ  ಶ್ರೇಣಿಯನ್ನು create ಮಾಡಬಹುದು
  • GST ಸಲ್ಲಿಕೆ ವರದಿಗಳನ್ನು ನಿಮ್ಮ ತಕ್ಷಣದ ಉಲ್ಲೇಖಕ್ಕಾಗಿ ತ್ವರಿತವಾಗಿ ತೋರಿಸುತ್ತದೆ 
  • ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ರತಿಯೊಂದು registration ಗೆ ಅಥವಾ ಎಲ್ಲಾ registration ಗಳಿಗೆ  GST ಸಲ್ಲಿಕೆಗಳ  Export
  • e-Invoice ಮತ್ತು e-Way Bill ಚಟುವಟಿಕೆಗಳಿಗೆ ನಿರ್ದಿಷ್ಟ GST registration ನ credentials ಗಳ  ಬಳಕೆ

ಇದರ ಜೊತೆಗೆ, ಅಮಾನತುಗೊಂಡ ಅಥವಾ ಶರಣಾಗತಿಯಾದ ಸಂದರ್ಭದಲ್ಲಿ ಒಂದು ನಿರ್ದಿಷ್ಟ  GST registration ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಹಾಗೂ ಅವಶ್ಯಕತೆ ಇದ್ದಲ್ಲಿ, ಪುನಃ GST registration ಅನ್ನುಸಕ್ರಿಯಗೊಳಿಸಬಹುದಾದ ಸೌಲಭ್ಯವಿದೆ 

GST ವಿವರಗಳನ್ನು ನಿಗದಿಪಡಿಸುವುದು

ನೀವು ಈಗ ವಿವಿಧ ಬಗೆಯ master ಗಳಲ್ಲಿ GST ದರ ಮತ್ತು HSN/SAC ಅನ್ನು ಪ್ರತ್ಯೇಕವಾಗಿ  ನಿಗದಿಪಡಿಸಿ ಮತ್ತು update ಮಾಡಬಹುದಾಗಿದೆ. party ಯ GST registration ವಿವರಗಳನ್ನು  update ಮಾಡುವುದು ಮತ್ತಷ್ಟು ಸುಲಭವಾಗಿದೆ. ಇದಲ್ಲದೆ, ನೀವು ಯಾವುದೇ master ನಲ್ಲಿ slab rate ಗಳನ್ನು Stock item, Stock group, ledger, ಅಥವಾ group ನಲ್ಲಿ ನಿಮ್ಮ ಅವಶ್ಯಕತೆಗೆ  ತಕ್ಕಂತೆ ನಿಗದಿಪಡಿಸಬಹುದಾಗಿದೆ 

GST ದರ ಮತ್ತು HSN/SAC ವಿವರಗಳು

GST Rate ಮತ್ತು HSN/SAC ವಿವರಗಳನ್ನು ನಮೂದಿಸುವುದು ಈಗ ಮತ್ತಷ್ಟು ಸುಲಭವಾಗಿದೆ. ನೀವು ಈ ವಿವರಗಳನ್ನು ಪ್ರತ್ಯೇಕ master ಗಳಲ್ಲಿ ನಮೂದಿಸಬಹುದಾಗಿದೆ. ಮತ್ತೊಂದೆಡೆ,  ವಿವರಗಳನ್ನು ವೌಚೆರ್ create ಮಾಡುವ ಸಂದರ್ಭದಲ್ಲಿ override ಮಾಡುವ ಸೌಲಭ್ಯವು  ಮತ್ತಷ್ಟು ಹೊಂದಿಕೊಳ್ಳುವ ಬಲವನ್ನು ನೀಡುತ್ತದೆ.

ಈಗ ನೀವು

  • GST ದರ ಮತ್ತು HSN/SAC ವಿವರಗಳ ಮೂಲವನ್ನು F11 Company features ಗಳಲ್ಲಿಯೇ ನಿಗದಿ  ಪಡಿಸಬಹುದು

ತರುವಾಯ ನೀವು ವೌಚೆರ್ create ಮಾಡಿದಾಗ  GST ದರ ಮತ್ತು HSN/SAC ವಿವರಗಳನ್ನು  F11 company feature ನಲ್ಲಿ ನಿಗದಿಪಡಿಸಿದಂತೆ ಪರಿಗಣಿಸಬಹುದಾಗಿದೆ 

  • GST ದರ ವಿವರಗಳನ್ನು ಒಂದು master ನಲ್ಲಿ (ಉದಾಹರಣೆಗೆ Stock Group ನಲ್ಲಿ) ಮತ್ತು  HSN/SAC ವಿವರಗಳನ್ನು ಮತ್ತೊಂದು master ನಿಂದ (ಉದಾಹರಣೆಗೆ Stock Item ಗೆ) ಆಯ್ಕೆ  ಮಾಡಿ update ಮಾಡಬಹುದಾಗಿದೆ 
  • GST ಮತ್ತು HSN/SAC ವಿವರಗಳನ್ನು Override ಅನ್ನು ಯಾವುದೇ ಇತರೆ master ಗಳಲ್ಲಿ ಅಥವಾ ವೌಚೆರ್ create ಮಾಡುವ ಸಂಧರ್ಭದಲ್ಲಿ ಮಾಡಬಹುದಾಗಿದೆ

GST Registration ವಿವರಗಳು

GST Registration ವಿವರಗಳನ್ನು (ಉದಾಹರಣೆಗೆ GSTIN, Registration ವಿಧಗಳು) ಮತ್ತು mailing ವಿವರಗಳನ್ನು (ಉದಾಹರಣೆಗೆ ವಿಳಾಸ, ರಾಜ್ಯ, ದೇಶ) ಒಂದು registration ಗೆ  master  ಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದೇ ಪ್ರಭಾವವಿಲ್ಲದಂತೆ  ನವೀಕರಿಸಬಹುದು

  • ಈ ಮುಂಚೆ ದಾಖಲಿಸಿದ ವಹಿವಾಟುಗಳು 
  • ಹಿಂದಿನ ಅವಧಿಯಲ್ಲಿ file ಮಾಡಲಾದ ಸಲ್ಲಿಕೆಗಳು  

ಮತ್ತಿನ್ನಿನೇನು GST registration ವಿವರಗಳ update ಇತಿಹಾಸವನ್ನು ಪರಿಶೀಲಿಸಬಹುದಾದ ಹೊಸದಾಗಿ ಪರಿಚಯಿಸಿದ ಸೌಲಭ್ಯವು ಈ ಕೆಳಗಿನ ಸೌಲಭ್ಯವನ್ನು ನೀಡುತ್ತದೆ 

  • GST registration ವಿವರಗಳಲ್ಲಿನ update ಸ್ವರೂಪ 
  • update ಮಾಡಲಾದ ದಿನಾಂಕ

Master ಗಳಲ್ಲಿನ Slab Rate  

Item ಅಥವಾ services ಗಳಲ್ಲಿ ವಿವಿಧ ಮೊತ್ತಗಳಿಗೆ slab ಬದಲಾಗುವ GST rate ಅನ್ನು ನೀವು  ಈಗ slab rate ಅನ್ನು stock item ಅಲ್ಲದೆ stock group, ledger ಅಥವಾ Company ಯಲ್ಲಿಯೂ  ಸಹ ನಿಮ್ಮ ಅವಶ್ಯಕತೆಗೆ ತಕ್ಕಂತೆ ನಮೂದಿಸಬಹುದು 

GST ವಹಿವಾಟುಗಳು

ವಹಿವಾಟುಗಳಲ್ಲಿ tax ಲೆಕ್ಕಾಚಾರ ಮಾಡುವುದು ಈಗ ಮತ್ತಷ್ಟು ಸುಲಭಗೊಳಿಸಲಾಗಿದೆ. TallyPrime ನಲ್ಲಿ ಆಯಾ Master ಗಳಲ್ಲಿ ಒದಗಿಸಿದಂತೆ GST ದರ ಮತ್ತು HSN/SAC ವಿವರಗಳನ್ನು ಪರಿಗಣಿಸುತ್ತದೆ ಹಾಗೂ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ voucher create ಮಾಡುವ ಸಮಯದಲ್ಲಿ ಸುಲಲಿತವಾಗಿ override ಮಾಡಬಹುದಾಗಿದೆ

TallyPrime Release 3.0 ನಲ್ಲಿ ನೀವು ಈಗ :

  • ನೀವು ಹಲವಾರು GST registration ಗಳನ್ನು ಒಂದೇ ಕಂಪನಿಯಲ್ಲಿ ನಿರ್ವಹಿಸುವಾಗ ಯಾವುದೇ GST registration ಗೆ ವಹಿವಾಟುಗಳನ್ನು ದಾಖಲಿಸಬಹುದು 
  • Nature of Transaction ಅನ್ನು ಪ್ರತಿಯೊಂದು ledger ಗೆ ನಿಗದಿಪಡಿಸುವ ಬದಲು ವೌಚೆರ್ ಗಳಲ್ಲಿ ಮಾಡಬಹುದು
  • GST rate ಮತ್ತು HSN/SAC code ಗಳನ್ನು ವಹಿವಾಟುಗಳಲ್ಲಿ ಅನಾಯಾಸವಾಗಿ override ಮಾಡಬಹುದು
  • ವಹಿವಾಟುಗಳಲ್ಲಿ GST status ಅನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ Reconciled, Unreconciled, Mismatched ಅಥವಾ  Excluded ಎಂದು ಬದಲಾಯಿಸಬಹುದು 

ಇದನ್ನು ನೀವು GSTR-2A Reconciliation ವರದಿಗಳಲ್ಲಿಯೂ ಸಹ  ಹಲವಾರು ವಹಿವಾಟುಗಳಿಗೆ  ಮಾಡಬಹುದಾಗಿದೆ 

  • Return Effective date ಬದಲಾವಣೆ ಮಾಡಿ ಸುಲಭವಾಗಿ ವೌಚೆರ್ ಅನ್ನು ಇನ್ನೊಂದು Return ಅವಧಿಗೆ ವರ್ಗಾಹಿಸಬಹುದು

ಇದನ್ನು ನೀವು GST ಸಲ್ಲಿಕೆಗಳಾದ GSTR-1, GSTR-3B, ಮತ್ತು GSTR-2A Reconciliation ವರದಿಗಳಲ್ಲಿಯೂ ಸಹ ಹಲವಾರು ವಹಿವಾಟುಗಳಿಗೆ ಮಾಡಬಹುದಾಗಿದೆ 

  • Return ಅನ್ನು Signed ಎಂದು ಗುರುತು ಮಾಡುವುದರಿಂದ ಸಲ್ಲಿಕೆಗಳನ್ನು sign ಮಾಡಿದ ನಂತರದ ಯಾವುದೇ ಬದಲಾವಣೆಗಳನ್ನು ಟ್ರ್ಯಾಕ್ ಮಾಡಬಹುದು 
  • Return effective date ಒದಗಿಸುವುದರಿಂದ ಭವಿಷ್ಯದ Return ಅವಧಿಗೆ ವೌಚೆರ್ ಅನ್ನು  Amend ಮಾಡಬಹುದಾಗಿದೆ 
  • GST Adjustment ಗಳನ್ನು ಲಭ್ಯವಿರುವ ವಿಶಾಲ ಆಯ್ಕೆಯೊಂದಿಗೆ ಶಾಸನಾತ್ಮಕ  ಹೊಂದಾಣಿಕೆಗಳನ್ನು ನಿಮ್ಮ business ಸನ್ನಿವೇಶ ಮತ್ತು ಅಭ್ಯಾಸಗಳಿಗೆ  ಅನುಗುಣವಾಗಿ ಮಾಡಬಹುದಾಗಿದೆ

ಶಾಸನಾತ್ಮಕ ಹೊಂದಾಣಿಕೆಗೆ increase in Tax Liability, Increase in Input Tax Credit, Increase in Tax Liability & Input Tax Credit, ಮತ್ತು ಇತರೆ ಆಯ್ಕೆಗಳನ್ನು ಒದಗಿಸಲಾಗಿದೆ

  • ನಿರಾತಂಕವಾಗಿ GST Registration ವಿವರಗಳನ್ನು master ನಿಂದ transaction ವರೆಗೆ ನಕಲು  ಮಾಡಬಹುದಾಗಿದೆ

  GST registration ವಿವರಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ 

    • Company GST Registration ವಿವರಗಳು (ಬದಲಾಯಿಸಲಾಗದ)
    • Party ಯ GST registration ವಿವರಗಳು
    • Tax ದರ ವಿವರಗಳು
    • HSN/SAC ವಿವರಗಳು
    • Include in Assessable Value ಅನ್ನು ನಿಗದಿಪಡಿಸುವುದು
  • portal ನಲ್ಲಿ ಕರಾರುವಕ್ಕಾಗಿ ತೋರಿಸುವಂತೆ GST, e-Invoice ಮತ್ತು e-Invoice ವಹಿವಾಟುಗಳ data ವನ್ನು ನೋಡಬಹುದು 

ನೀವು ಮೇಲೆ ಉಲ್ಲೇಖಿಸಲಾದ ಸೌಲಭ್ಯಗಲ್ಲದೆ ಈ ಕೆಳಗಿನವುಗಳನ್ನು ಸಹ ಮಾಡಬಹುದು 

  • Material In ಮತ್ತು Material Out ವೌಚೆರ್ ಗಳಲ್ಲಿ GST ಯನ್ನು ಲೆಕ್ಕಾಚಾರ ಮಾಡಬಹುದು 
  • purchase ವೌಚೆರ್ ಗಳಲ್ಲಿ Tax Analysis ಅನ್ನು ನೋಡಬಹುದು 
  • Domestic ಮತ್ತು international ಪೂರೈಕೆದಾರಗಳೆರಡರಲ್ಲೂ Place of Supply ಅನ್ನು ಆಯ್ಕೆ ಮಾಡಬಹುದು 

ಮತ್ತಿನ್ನಿನೇನು, ನೀವು GST ಸಲ್ಲಿಕೆಯ ಮೌಲ್ಯವನ್ನು ಬದಲಾಯಿಸಿದಾಗ, TallyPrime ವೌಚೆರ್ ಅನ್ನು ಮರು  save ಮಾಡುವಾಗ ಈ ಕೆಳಗಿನ ನಿರ್ಣಯಗಳನ್ನು ತೋರಿಸುತ್ತದೆ

  • ಮೌಲ್ಯಗಳಲ್ಲಿನ ವ್ಯತ್ಯಾಸವನ್ನು ಒಪ್ಪಿಕೊಂಡು, ನಂತರ mismatch ಪರಿಹರಿಸು
  • ಮೌಲ್ಯಗಳಲ್ಲಿನ ವ್ಯತ್ಯಾಸವನ್ನು ಒಪ್ಪಿಕೊಂಡು ವೌಚೆರ್ ಗಳು  mismatch ಆಗಿಲ್ಲ ಎಂದು  ಖಾತರಿಪಡಿಸಿಕೊಳ್ಳಬಹುದು
  • ಅವಶ್ಯವಿದ್ದಲ್ಲಿ, ವೌಚೆರ್ ಗೆ ವಾಪಸ್ಸಾಗಿ  ಮತ್ತು ಮೂಲ ಮೌಲ್ಯಕ್ಕೆ ಹಿಂದಿರುಗಬಹುದು 

Voucher Type ಗೆ ಪೂರ್ವನಿಯೋಜಿತ GST Registration

ಒಂದೇ ಕಂಪನಿಯಲ್ಲಿ ಹಲವಾರು GST Registration ಗಳಿದ್ದಲ್ಲಿ, ನೀವು ಒಂದು ನಿರ್ದಿಷ್ಟ  voucher type ಗೆ GST registration ಒಂದನ್ನು ಪೂರ್ವನಿಯೋಜಿಸಬಹುದಾಗಿದೆ 

ಉದಾಹರಣೆಗೆ, ಒಂದು ನಿರ್ದಿಷ್ಟ journal voucher ಅನ್ನು ಒಂದು ನಿರ್ದಿಷ್ಟ ಆಫೀಸ್ ಅಥವಾ  ಸ್ಥಳಕ್ಕೆ ದಾಖಲು ಮಾಡುವಾಗ, ನೀವು ಅ ಸ್ಥಳದ GST registration ಅನ್ನು ಒಂದು ನಿರ್ದಿಷ್ಟ Journal Voucher type ಗೆ  ಪೂರ್ವನಿಯೋಜಿಸಬಹುದು

ತದನಂತರ ನೀವು ವೌಚೆರ್ ಒಂದನ್ನು create ಮಾಡಿದಾಗ, ಅ voucher type ನಲ್ಲಿ ಪೂರ್ವನಿಯೋಜಿತ GST registration ಆಯ್ಕೆಯಾಗಿ, ನಿಮ್ಮ GST registration ಅನ್ನು  ಬದಲಾಯಿಸುವ ಸಮಯವನ್ನು ಉಳಿಸುತ್ತದೆ 

Automatic ಅಥವಾ Multi-user Auto ಗಳಿಗೆ ಮೂಲ voucher ಸಂಖ್ಯೆಯನ್ನು ಉಳಿಸಿಕೊಳ್ಳುವುದು 

Automatic ಅಥವಾ Multi-user Auto voucher number ವಿಧಾನಗಳಿರುವ voucher type ಗಳಿಗೆ , ವೌಚೆರ್ ಸೇರಿಸುವುದು ಅಥವಾ ಅಳಿಸುವುದು ಅದ ಸಂಧರ್ಭದಲ್ಲಿ TallyPrime ಮೂಲ  voucher number ಅನ್ನು ಉಳಿಸಿಕೊಳ್ಳುತ್ತದೆ 

vವೌಚೆರ್ ಸೇರಿಸುವಿಕೆ ಅಥವಾ ಅಳಿಸುವಿಕೆಯಾದ ಸಂಧರ್ಭದಲ್ಲಿ ವಹಿವಾಟಿನ ಮೂಲ  voucher number ಹಾಗೆಯೆ ಇರುತ್ತದೆ ಎಂಬುದನ್ನು ಖಾತರಿಪಡಿಸುತ್ತದೆ 

ಆದಾಗಿಯೂ, ನಿಮ್ಮ business ನ ಅಭ್ಯಾಸದದಂತೆ  ವೌಚೆರ್ ಸೇರಿಸುವಿಕೆ ಅಥವಾ ಅಳಿಸುವಿಕೆಯಾದ ಸಂಧರ್ಭದಲ್ಲಿ ನೀವು ವೌಚೆರ್ ಗಳು ಮರು ಸಂಖ್ಯೆಯಾಗುವುದನ್ನು  ಆಯ್ಕೆ ಮಾಡಬಹುದು 

ನಿರ್ದಿಷ್ಟ GST Registration ಗೆ ವೌಚೆರ್ ಸಂಖ್ಯೆಯ ಶ್ರೇಣಿ 

ಕಂಪನಿಯಲ್ಲಿ ಹಲವಾರು GST Registration ಗಳಿದ್ದಲ್ಲಿ, ಪ್ರತಿಯೊಂದು registration ಗೆ ಮತ್ತು ವೌಚೆರ್ type ಗೆ ವೌಚೆರ್ ಸಂಖ್ಯೆ ಶ್ರೇಣಿಯನ್ನು create ಮಾಡಬಹುದು. ಇದರಿಂದ ನಿಮ್ಮ data ಮತ್ತು GST ಸಲ್ಲಿಕೆಗಳಲ್ಲಿಯೂ ಸಹ ವೌಚೆರ್ ಸಂಖ್ಯೆಯ ಸಂಘರ್ಷವನ್ನು ತಪ್ಪಿಸಬಹುದು

GST ಸಲ್ಲಿಕೆಗಳು 

TallyPrime Release 3.0 ನಿಮ್ಮ ತ್ವರಿತ ಉಲ್ಲೇಖಕ್ಕಾಗಿ ಹೆಚ್ಚು ವೇಗವಾಗಿ  GST ಸಲ್ಲಿಕೆಗಳನ್ನು  ಪ್ರಾರಂಭಿಸುತ್ತದೆ. ಇಷ್ಟೇ ಅಲ್ಲದೆ GST ಸಲ್ಲಿಕೆಗಳಾದ GSTR-1 ಮತ್ತು GSTR-3B ಯಂತಹ  GST ವರದಿಗಳನ್ನು ಮತ್ತಷ್ಟು ಸರಳಗೊಳಿಸಿ ಸುಧಾರಿಸಲಾಗಿದೆ 

  • ಒಂದು ನಿರ್ದಿಷ್ಟ GST registration ಗೆ ಅಥವಾ ಎಲ್ಲಾ GST registration ಗಳಿಗೆ GST ಸಲ್ಲಿಕೆಯನ್ನು  ನಿಮ್ಮ ಅವಶ್ಯಕತೆಗೆ ತಕ್ಕಂತೆ ವೀಕ್ಷಣೆ ಮಾಡಬಹುದಾಗಿದೆ 
  • ವಿವಿಧ GST ಸಲ್ಲಿಕೆಗಳ filing ಗಳಿಗೆ ಎಲ್ಲಾ ಅವಧಿಯ ಬಾಕಿ ಇರುವ ಎಲ್ಲಾ ಚಟುವಟಿಕೆಗಳನ್ನು Track GST Return Activities ವರದಿಯ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ
  • Uncertain transaction ಗಳನ್ನು ಮತ್ತಷ್ಟು ಸುಲಭವಾಗಿ ಬಗೆಹರಿಸಬಹುದಾಗಿದೆ
  • ತೆರಿಗೆ ಸಂಬಂದಿತ ಮೌಲ್ಯಗಳು ಹೊಂದಾಣಿಕೆಯಾಗದೆ ಇದ್ದಲ್ಲಿ ನಮೂದುಗಳನ್ನು ಹಾಗೆಯೆ ಇರುವಂತೆ ಒಪ್ಪಿಕೊಳ್ಳಬಹುದಾಗಿದೆ ಮತ್ತು ಈ ತರಹದ ನಮೂದುಗಳನ್ನು ಸಂಬಂಧಿತ ವರದಿಗಳಲ್ಲಿ Transactions Accepted As Valid ವರದಿಯಲ್ಲಿ ನೋಡಬಹುದು
  • ನೀವು ಕೆಲವೊಂದು ನಮೂದುಗಳನ್ನು ಬೇರೊಂದು ಅವಧಿಯ ಸಲ್ಲಿಕೆಗಳಿಗೆ ವರ್ಗಾಹಿಸಲು Return effective date ಅನ್ನು ಒಂದಕ್ಕಿಂತ ಹೆಚ್ಚು ನಮೂದುಗಳಿಗೆ ನಿಗದಿಪಡಿಸಬಹುದು
  • ಅವಶ್ಯವಿದ್ದಲ್ಲಿ, Signed Return ನಲ್ಲಿನ ವಹಿವಾಟುಗಳನ್ನು ಹೊಸದಾದ Return Effective date ನೊಂದಿಗೆ Amend ಮಾಡಬಹುದಾಗಿದೆ
  • Export ಮಾಡಲಾದ ಸಲ್ಲಿಕೆಗಳನ್ನು ಬದಲಾವಣೆ ಮಾಡಿದ ಅಥವಾ ಅಳಿಸಿದ ವಹಿವಾಟುಗಳನ್ನು ಗುರುತಿಸಬಹುದಾಗಿದೆ 
  • Track GST Return Activities ವರದಿಯು ನಿಮಗೆ  
    • ಬಾಕಿಯಿರುವ ಚಟುವಟಿಕೆಗಳಾದ uncertain transactions, export ಮತ್ತು signing ಅನ್ನು  ಗುರುತಿಸುತ್ತದೆ
    • ಸಕಾಲಕ್ಕೆ ಸರಿಯಾಗಿ ಸಲ್ಲಿಕೆಗಳನ್ನು file ಮಾಡಲು ಕ್ರಮಗಳನ್ನು ತೆಗೆದುಕೊಂಡು ಚಟುವಟಿಕೆಗಳನ್ನು ಪೂರ್ಣಗೊಳಿಸಬಹುದು 
    • ವಹಿವಾಟುಗಳನ್ನು ದಾಖಲಿಸಿದ ಮತ್ತು ಕ್ರಮಗಳನ್ನು ನಿರ್ವಹಿಸುವ ಆಧಾರದ ಮೇಲೆ  ವರದಿಗಳಲ್ಲಿ ಸಂಬಂಧಿತ ಸೆಕ್ಷನ್ ಗಳಲ್ಲಿ ನವೀಕರಿಸಿದ ವಿವರಗಳನ್ನು ನೋಡಬಹುದು
  • ವಿವಿಧ ಅವಧಿಯ ಬಾಕಿಯಿರುವ ಕ್ರಮಗಳನ್ನು ಬೇರೊಂದು ಬಣ್ಣದ ಸಹಾಯದಿಂದ ಪ್ರಮುಖ ಅಂಶಗಳನ್ನು ಗುರುತಿಸಲಾಗುವುದು 
  • Export ಮಾಡಲಾಗುವ ಸಲ್ಲಿಕೆಗಳ ಮಾಹಿತಿಯನ್ನು ಮುನ್ನೋಟ ವರದಿ ಮೂಲಕ ಪರಿಶೀಲನೆಗೆ ವೀಕ್ಷಣೆ ಮಾಡಬಹುದು 
  • ನಿಮ್ಮ ಅವಶ್ಯಕತೆಗೆ ತಕ್ಕಂತೆ ಒಂದು ನಿರ್ದಿಷ್ಟ GST registration ಅನ್ನು ಅಥವಾ ಎಲ್ಲಾ  registration ಗಳ GST ಸಲ್ಲಿಕೆಗಳನ್ನು export ಮಾಡಬಹುದು

           Top menu ನಲ್ಲಿನ Exchange ನ ಅಡಿಯಲ್ಲಿನವುಗಳಿಂದ ಇವುಗಳನ್ನು ಮಾಡಬಹುದು 

    • ಹಲವಾರು GST registration ಗಳಿದ್ದಲ್ಲಿ ಎಲ್ಲಾ GST registration ಅಥವಾ ಒಂದು ನಿರ್ದಿಷ್ಟ  GST registration ಅನ್ನು ಮಾಡಬಹುದು 
    • ವಿಭಾಗವಾರು json files ನಿಮ್ಮ ಅವಶ್ಯಕತೆಗೆ ತಕ್ಕಂತೆ 
    • ನಿಮ್ಮ ಆಯ್ಕೆಗೆ ಅನುಗುಣವಾಣಿ format ಗಳಾದ JSON, MS Excel, ಅಥವಾ  CSV.
    • GSTR-3B data ವನ್ನು MS Excel ನಲ್ಲಿ

GST portal ನಲ್ಲಿ ಲಭ್ಯವಿರುವ Excel utility ಯಂತೆಯೇ  ತದ್ರೂಪವಾಗಿದೆ, ಇದು GSTR-3B filing ಅನ್ನು ಮತ್ತಷ್ಟು ಸುಲಭಗೊಳಿಸಿದೆ

GSTR-1, GSTR-2A, and GSTR-2B ನಲ್ಲಿ ವಹಿವಾಟುಗಳ ಸಮನ್ವಯಗೊಳಿಸುವಿಕೆ

GSTR-1, GSTR-2A, ಮತ್ತು GSTR-2B ವರದಿಗಳಲ್ಲಿ ನಿಮ್ಮ ಪೂರೈಕೆದಾರರ ವಹಿವಾಟುಗಳನ್ನು reconcile ಮಾಡುವ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ. ಇದು ನಿಮ್ಮ books ನಲ್ಲಿನ ವಿವರಗಳನ್ನು GST portal ವಿವರಗಳೊಂದಿಗೆ ಹೊಂದಾಣಿಕೆಯಾಗುತ್ತಿದೆಯೇ  ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು . ಇದಲ್ಲದೆ ನಿಮ್ಮ books ನಲ್ಲಿನ reconcile ಆಗದ ವಹಿವಾಟುಗಳನ್ನು ಸಂಭಾವ್ಯ ಹೊಂದಾಣಿಕೆಯನ್ನು ಗುರುತಿಸುವ ಸೌಕರ್ಯದಿಂದ reconcile ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ 

ನೀವು ಈಗ

  • GSTR-1, GSTR-2A, and GSTR-2B ಅನ್ನು JSON file ಗಳ ಮೂಲಕ Import ಮಾಡಬಹುದಾಗಿದೆ
  • ವಹಿವಾಟುಗಳನ್ನು Reconcile ಮಾಡಬಹುದು
    • GST portal ನಿಂದ ವಹಿವಾಟುಗಳನ್ನು download ಮಾಡಿದ ನಂತರ Import ಮಾಡಿ Reconcile ಮಾಡಬಹುದು 
    • ಬೇರೊಂದು Return ಅವಧಿಯ ವಹಿವಾಟುಗಳನ್ನು ಸಹ Return Effective date ಅನ್ನು ನವೀಕರಿಸಿದ ನಂತರ Reconcile ಮಾಡಬಹುದು
    • ಹೊಂದಾಣಿಕೆಯಾಗದ ವಹಿವಾಟುಗಳ ಮಿತಿಯನ್ನು ನಿಗದಿಪಡಿಸಬಹುದು 
    • Document ಸಂಖ್ಯೆಯ prefix ನಲ್ಲಿ ಸೊನ್ನೆಯನ್ನು ಅಥವಾ special character ಗಳನ್ನು GSTR-2A ಮತ್ತು GSTR-2B ಗಳಲ್ಲಿ ನಿರ್ಲಕ್ಷಿಸಿಬಹುದಾಗಿದೆ
    • Document ಸಂಖ್ಯೆ ಅಥವಾ Invoice ಸಂಖ್ಯೆಗಳಲ್ಲಿ, party ಯು ಬಳಸಿದ prefix ಅನ್ನು ನಿರ್ಲಕ್ಷಿಸಿ GSTR-2A and GSTR-2B ಗಳಲ್ಲಿ reconciliation ಮಾಡಬಹುದು 
  • ವಹಿವಾಟುಗಳನ್ನು Reconciled ಅಥವಾ Mismatch ಎಂದು ನಿಮ್ಮ ಅವಶ್ಯಕತೆಗೆ ತಕ್ಕಂತೆ ವಹಿವಾಟು ಸ್ಥಿತಿಯನ್ನು ಗುರುತುಮಾಡಬಹುದು
  • ಪೂರೈಕೆದಾರರ invoice ಸಂಖ್ಯೆ ಮತ್ತು date ಅನ್ನು, document ಸಂಖ್ಯೆ ಮತ್ತು date ಎಂದು  ಪರಿಗಣಿಸಿ reconcile ಮಾಡಬಹುದು 
  • GSTR -2B ಯಲ್ಲಿ Input Tax Credit ಲಭ್ಯವಿಲ್ಲದ ವಹಿವಾಟುಗಳನ್ನು ಗುರುತಿಸಿಬಹುದು 

ಮತ್ತಿನ್ನೇನು, ವಹಿವಾಟುಗಳು GST portal ನಲ್ಲಿ ಲಭ್ಯವಿದ್ದು ಮತ್ತು books ನಲ್ಲಿ  ಲಭ್ಯವಿಲ್ಲವಾಗಿದ್ದಲ್ಲಿ ಅಥವಾ ಪ್ರತಿಕ್ರಮವಾಗಿದ್ದಲ್ಲಿ(vice-versa), ಮೌಲ್ಯಗಳೊಂದಿಗೆ  ಹೊಂದಾಣಿಕೆಯಾಗುತ್ತಿದ್ದು ಹಾಗು document ಸಂಖ್ಯೆ,  party ಯ GSTIN/UIN ಅಥವಾ Return ನಲ್ಲಿ section ಬೇರೆಯಾಗಿದ್ದಲ್ಲಿ ಇಂತಹವುಗಳನ್ನು ಗುರುತಿಸಲು TallyPrime ಸಹಾಯಮಾಡುತ್ತದೆ  ತದನಂತರ ಇದು ವಹಿವಾಟುಗಳನ್ನು ತ್ವರಿತವಾಗಿ reconcile ಮಾಡಲು ಸಹಾಯ ಮಾಡುತ್ತದೆ 

ಹೆಚ್ಚಿನ ಮಾಹಿತಿಗಾಗಿ Reconcile GSTR-1 DataReconcile GSTR-2A Data, and Reconcile GSTR-2B Data   ವಿಷಯವನ್ನು ನೋಡಿರಿ 

Report Filter ಸಹಾಯದಿಂದ Business ಮಾಹಿತಿಯನ್ನು ತ್ವರಿತವಾಗಿ ಪಡೆಯಬಹುದಾಗಿದೆ  

ಬೇಕಾದ ಮಾಹಿತಿಯನ್ನು ಹುಡುಕುವುದು ಮತ್ತು data ವಿಶ್ಲೇಷಣೆಗಳನ್ನು ಈಗ report filter ನಂತಹ ಬಹುಮುಖ ಸೌಕರ್ಯದಿಂದ ಮತ್ತಷ್ಟು ತ್ವರಿತ, ಸರಳ ಮತ್ತು ಆಹ್ಲಾದಕರಗೊಳಿಸಿದೆ. ಅವುಗಳೆಂದರೆ 

  • ಅನ್ವೇಷಣೆ ಮಾಡುವುದು ಸುಲಭ
  • ಒಂದು click ನ ಸಹಾಯದಿಂದ ಪ್ರವೇಶ ಪಡೆಯಬಹುದು  
  • Business ಸನ್ನಿವೇಶಗಳೆಲ್ಲವನ್ನು ಪರಿಗಣಿಸಿ ಸುಧಾರಿಸಲಾಗಿದೆ 

ಒಂದು report ನಲ್ಲಿ ನೀವು ಈಗ :

  • ಎಲ್ಲಾ field ಗಳಲ್ಲಿ ಅಥವಾ ಒಂದು ನಿರ್ದಿಷ್ಟ field ನಲ್ಲಿ, ವಹಿವಾಟು ಅಥವಾ ಮಾಸ್ಟರ್ ಗಳಲ್ಲಿ ನಿಮ್ಮ ಅವಶ್ಯಕತೆಗೆ ತಕ್ಕಂತೆ ಮಾಹಿತಿಯನ್ನು ಹುಡುಕಬಹುದಾಗಿದೆ   
  • ನೀವು ವಹಿವಾಟು ಮತ್ತು ಮಾಸ್ಟರ್ ಗಳಲ್ಲಿ ಲಭ್ಯವಿರುವ ಸಮಗ್ರ field ಗಳ ವ್ಯಾಪ್ತಿಯಲ್ಲಿ ಹುಡುಕಬಹುದು. ಅವು ಯಾವುಗಳೆಂದರೆ  
    • GSTIN/UIN, GST ದರಗಳು, HSN/SAC ಯಂತಹ GST ವಿವರಗಳು 
    • supplementary details ನಲ್ಲಿರುವ field ಗಳು 
    • e-Way Bill ಮತ್ತು e-Invoice ಗಳಿಗೆ ಸಂಬಂದಿಸಿದ field ಗಳು 
  • ನಿರ್ದಿಷ್ಟತೆ ಮತ್ತು ಸಂಕೀರ್ಣತೆಯ ಆಧಾರದ ಮೇಲೆ ನಿಮಗೆ ಬೇಕಾದ ಮಾಹಿತಿಯನ್ನು ಈ ಕೆಳಗಿನ filter ಬಗೆಗಳನ್ನು ಆಯ್ಕೆ ಮಾಡಬಹುದಾಗಿದೆ
    • Basic filter ಗಳು, ಇವು ತ್ವರಿತ search engine ನಂತೆ ಕೆಲಸ ಮಾಡುತ್ತದೆ 
    • Multi-filter ಗಳು, ಒಂದಕ್ಕಿಂತ ಹೆಚ್ಚು ಮಾನದಂಡಗಳೊಂದಿಗೆ ಮಾಹಿತಿಯನ್ನು ಹುಡುಕಲು ಸಹಾಯಮಾಡುತ್ತದೆ 
    • Advanced Filter ಗಳು, ನೀವು ಹುಡುಕ ಬೇಕಾದ ಮಾನದಂಡಗಳನ್ನು ಸೇರಿಸಿ ಮಾಸ್ಟರ್ ಮತ್ತು ವಹಿವಾಟುಗಳೆಡರಲ್ಲೂ ಮಾಹಿತಿಯನ್ನು ಹುಡುಕಲು ಸಹಾಯಮಾಡುತ್ತದೆ 
  • ವರದಿಗಳಲ್ಲಿ ಬಳಸಿದ filter ನ ವಿವರಗಳನ್ನು ಒಂದು click ನಲ್ಲಿ ನೋಡಬಹುದು 
  • ಪುನರ್ ಬಳಸಬೇಕಾದ filter ಗಳಾಗಿದ್ದಲ್ಲಿ, ಒಂದು ಪೂರ್ವ ನಿಯೋಜಿತ filter ಅನ್ನು ಯಾವುದೇ ವರದಿಗಳಗೆ ಅನ್ವಯವಾಗುವಂತೆ ಆಯ್ಕೆ ಮಾಡಿ ಉಪಯೋಗಿಸಬಹುದಾಗಿದೆ 

ಮತ್ತಿನ್ನೆನಿದೆ, ನೀವು ವರದಿಗಳಲ್ಲಿ ಅನ್ವಯಿಸಿದ filter ಗಳ  ಮತ್ತು ಅವುಗಳ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ನೀವು Report View ಅನ್ನು Save ಮಾಡಬಹುದಾಗಿದೆ 

Payment Request

ಈಗ TallyPrime ನಲ್ಲಿ Payment Request ಸೌಲಭ್ಯದೊಂದಿಗೆ ಲಭ್ಯವಿದೆ. ಇದು payment link ಮತ್ತು QR codes (Payment Gateway or UPI) ಗಳನ್ನು ಬಳಸಿಕೊಂಡು ಸುಲಲಿತವಾಗಿ generate ಮಾಡಿ ಮತ್ತು ಹಂಚಿಕೊಳ್ಲಲು ಸಹಾಯ ಮಾಡುತ್ತದೆ. ಈ ಸೌಲಭ್ಯವು ಪಾರ್ಟಿಯು, ನಿಮ್ಮ ಪಾವತಿಯನ್ನು ತ್ವರಿತವಾಗಿ ಮತ್ತು ಸುಲಲಿತವಾಗಿ ಪಾವತಿಸಲು  ಅನುಕೂಲ ಮಾಡುತ್ತದೆ .

Payment Request ಈ ಕೆಳಕಂಡ ಸೌಲಭ್ಯಗಳಲ್ಲದೆ ಹೆಚ್ಚಿನ ಸೌಲಭ್ಯವನ್ನು ಒಳಗೊಂಡಿದೆ 

  • ತ್ವರಿತ Payment Request: ಒಮ್ಮೆ setup ಅನ್ನು ಪೂರ್ತಿಗೊಳಿಸಿದನಂತರ, TallyPrime ನಿಮಗೆ ತ್ವರಿತವಾಗಿ generate ಮಾಡಿ ಮತ್ತು  payment links ಹಾಗು QR code ಅನ್ನು ಹಂಚಿಕೊಳ್ಲಲು ಸಹಾಯ ಮಾಡುತ್ತದೆ. ಇವುಗಳು ನಿಮ್ಮ ದೈನಂದಿನ ವ್ಯವಹಾರದ ಭಾಗವಾಗಿರುತ್ತದೆ 
    ನಿಮ್ಮ ವ್ಯವಹಾರದದಲ್ಲಿ ಪಾರ್ಟಿಯ ಪಾವತಿಗಳಿಗೆ ವಿಶೇಷ ಅವಶ್ಯಕತೆಗಳಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಮತ್ತು ಅದಕ್ಕೆ ಅನುಗುಣವಾಗಿ TallyPrime ನಲ್ಲಿ ನಿಮ್ಮ ಅವಶ್ಯಕತೆಗೆ ತಕ್ಕಂತೆ ಹಲವಾರು ನಮ್ಯತೆಗಳನ್ನು ಮಾಡಿಕೊಳ್ಳಬಹುದಾಗಿದೆ 
  • ತಡೆರಹಿತ ಸಮನ್ವಯಗೊಳಿಸುಕೆ:ನಿಮ್ಮ ಎಲ್ಲಾ Payment request ಗಳ ಸುಲಲಿತವಾದ ಸಮನ್ವಯಗೊಳಿಸುಕೆ ಸೌಲಭ್ಯವನ್ನು TallyPrime ನೀಡುತ್ತದೆ. 
    ಸಮನ್ವಯಗೊಳ್ಳದ ಹಾಗು ಸಮನ್ವಯಗೊಳಿಸಿದ ವಹಿವಾಟುಗಳ ವಿವರಗಳನ್ನು Payment Reconciliation ವರದಿಯಲ್ಲಿ ನೋಡಬಹುದಾಗಿದೆ 
  • ದತ್ತಾಂಶ ಭದ್ರತೆ : ಹಣಕಾಸಿನ ದತ್ತಾಂಶ ಸುರಕ್ಷತೆ ನಿಮ್ಮ ವ್ಯವಹಾರದ ಪ್ರಮುಖ ಭಾಗವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಮತ್ತು ನಿಮ್ಮ ದತ್ತಾಂಶವನ್ನು ಸಂಪೂರ್ಣ ಸುರಕ್ಷಿತವಾಗಿರಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ 
    ನಾವು ಉತ್ತಮ ಭದ್ರತಾ ನೀತಿಗಳನ್ನು ನೀಡಲು ಪ್ರಮುಖ Payment Gateways ಗಳೊಂದಿಗೆ ಪಾಲುದಾರರಾಗಿದ್ದೇವೆ ಹಾಗು ನಿಮ್ಮ Payment ಗಳು ಸುರಕ್ಷಿತವಾಗಿದೆ ಎಂಬ ಭರವಸೆಯನ್ನು ನೀಡುತ್ತೇವೆ 

ಹೆಚ್ಚಿನ ಮಾಹಿತಿಗಾಗಿ Payment Request in TallyPrime  ವಿಷಯವನ್ನು ನೋಡಿರಿ 

Data ನಿರ್ವಹಣೆಯು ಅನುಭವವನ್ನು ಮತ್ತಷ್ಟು ಸುಧಾರಿಸಲಾಗಿದೆ 

ಸುಧಾರಿಸಿದ data ನಿರ್ವಹಣೆಯು ಸೌಲಭ್ಯವು release ಗೆ migration ಅನ್ನು ಅನಿಯಮಿತವಾಗಿಸುವುದಲ್ಲದೆ,  migration, repair, import ಮತ್ತು synchronisation ಗಳನ್ನು ಮತ್ತಷ್ಟು ಸರಳ, ಉತ್ಕೃಷ್ಟಗೊಳಿಸಿ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಹಾಗೂ ಚಟುವಟಿಕೆಗಳ ಪ್ರಗತಿಯ ವಿವರವನ್ನು ವೀಕ್ಷಿಸಬಹುದು ಮತ್ತು ಆಕ್ಷೇಪಣೆಗಳಿದ್ದಲ್ಲಿ ಬಗೆಹರಿಸಬಹುದಾಗಿದೆ

Migration ಮತ್ತು Repair ಅನುಭವವನ್ನು ಸುಧಾರಿಸಲಾಗಿದೆ 

Migration ಮತ್ತು Repair ನ ಸ್ಥಿತಿ 

ಯಾವುದೇ company ಯನ್ನು migrate ಅಥವಾ repair ಮಾಡಬೇಕೆಂಬ ವಿವರಗಳನ್ನು ನಿಮಗೆ company ಗಳ ಪಟ್ಟಿಯನ್ನು ತೋರಿಸುವ  ಸಂದರ್ಭದಲ್ಲಿ ನಿಖರವಾಗಿ ತೋರಿಸುತ್ತದೆ 

Migration ಮತ್ತು Repair ನ ಪ್ರಗತಿಯ ವಿವರಗಳು 

ಮಾಸ್ಟರ್ ಮತ್ತು ವಹಿವಾಟುಗಳ ಪರಿಶೀಲನೆಯಿಂದ ಮೊದಲುಗೊಂಡು, data migration ಅಥವಾ repair ಅನ್ನು ಯಶಸ್ವಿಗೊಳಿಸುವರೆಗೂ ಸುಧಾರಣೆ ಮಾಡಲಾಗಿದೆ. ಈ ಪ್ರಕ್ರಿಯೆಯು ನಿಮ್ಮನ್ನು ಪ್ರತಿ ಪ್ರಗತಿಯ ಸರಿಸಮಾನವಾಗಿರುವಂತೆ ನೋಡಿಕೊಳ್ಳುತ್ತದೆ 

Migration ಮತ್ತು Repair ಸಾರಾಂಶ ನೋಟ 

Migration ಅಥವಾ Repair ನ ಕೊನೆಯಲ್ಲಿ, ನೀವು ಪ್ರಕ್ರಿಯೆಯ ಮುಂಚಿನ ಮತ್ತು   ಪೂರ್ಣಗೊಳಿಸಿದ ನಂತರದ ಒಟ್ಟು ವಹಿವಾಟುಗಳು ಹಾಗೂ ಮಾಸ್ಟರ್ ಗಳ ಸಾರಾಂಶವನ್ನು ನೋಡಬಹುದು

ಇದು ನಿಮಗೆ ಪ್ರಕ್ರಿಯೆಯ ಸಂದರ್ಭದಲ್ಲಿ data loss ಆಗಿದೆಯೇ ಎಂದುದನ್ನು ತಿಳಿದುಕೊಳ್ಳಲು  ಸಮಯಮಾಡುತ್ತದೆ 

ಪ್ರಕ್ರಿಯೆಯ ಸಮಯದಲ್ಲಿ ಸಮಯದಲ್ಲಿನ error ಗಳನ್ನು ನೋಡಬಹುದು ಹಾಗೂ ಪರಿಹರಿಸಬಹುದಾಗಿದೆ 

Migration, repair, import ಅಥವಾ synchronisation ಪ್ರಕ್ರಿಯೆಯ ಕೊನೆಯಲ್ಲಿ ನೀವು ಸುಲಭವಾಗಿ :

  • ಪ್ರಕ್ರಿಯೆಯ ಸಮಯದಲ್ಲಿ ಸಂಭವಿಸುವ exception ಗಳನ್ನು ಗುರುತಿಸಬಹುದಾಗಿದೆ 
  • ಒಂದಕ್ಕಿಂತ ಹೆಚ್ಚು exception ಗಳನ್ನು ಒಂದೇ ಸಮಯದಲ್ಲಿ (ಅನ್ವಯವಾಗುವಂತೆ) ಪರಿಹರಿಸಬಹುದು 

ಮತ್ತಿನ್ನಿನಿದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ exception ಗಳನ್ನು ಪ್ರಕ್ರಿಯೆಯ  ಕೊನೆಯಲ್ಲಿ ಅಥವಾ ನಂತರದ ಸಮಯದಲ್ಲಿ ಪರಿಹರಿಸಬಹುದಾಗಿದೆ. 

Reset GSTN data

Import ಮಾಡಲಾದ GSTN data corrupt ಆಗಿದ್ದಲ್ಲಿ ಅಥವಾ ಆಕಸ್ಮಿಕವಾಗಿ data import ಆಗಿದ್ದಲ್ಲಿ, reconciliation ಸಮಯದಲ್ಲಿ ತೊಂದರೆಯಾಗಬಹುದು 

ಆಗಾಗಿ ಈಗ TallyPrime import ಮಾಡಲಾದ GSTN data ವನ್ನು reset ಮಾಡುವಂತಹ  ಸೌಲಭ್ಯವನ್ನು ತಂದಿದೆ, ನಿಮ್ಮ book data ವನ್ನು ಹಾಗೆಯೇ ಉಳಿಸಿಕೊಂಡು, corrupt ಆಗಿರುವ GSTN data ವನ್ನು ಅಳಿಸುತ್ತದೆ 

ಇದಾದನಂತರ, ನೀವು ಮತ್ತೊಮ್ಮೆ GSTR-1 ಅಥವಾ GSTR-2A JSON file ಅನ್ನು portal ನಿಂದ import ಮಾಡಿದ ನಂತರ ನಿಮ್ಮ ವಹಿವಾಟುಗಳನ್ನು reconcile ಮಾಡಲು  ಮುಂದುವರೆಯಬಹುದು 

ಒಂದೇ ಪರದೆಯಲ್ಲಿ ಹಲವಾರು ಕಂಪನಿಗಳನ್ನು connect ಅಥವಾ disconnect ಮಾಡಬಹುದು 

ನೀವು ಈಗ online access ಗಲಿ  ಹಲವಾರು ಕಂಪನಿಗಳನ್ನು ಒಂದೇ ಪರದೆಯಲ್ಲಿ connect ಅಥವಾ disconnect ಮಾಡಬಹುದು, ಇದರಿಂದ ಒಂದೊಂದೇ ಕಂಪನಿಯನ್ನು  ಆಯ್ಕೆ ಮಾಡುವ ಬದಲು ಸಮಯವನ್ನು ಉಳಿಸಹುದಾಗಿದೆ 

ವಿಶೇಷವಾಗಿ ಇದು ಹಲವಾರು ಕಂಪನಿಗಳಿರುವ  ಉದ್ಯಮದಲ್ಲಿ ನೀವು remote ನಲ್ಲಿ Synchronisation ಅಥವಾ Browser access ನಂತಹ online connect ನಲ್ಲಿ ಕೆಲಸ ಮಾಡುವಾಗ ಸಹಕಾರಿಯಾಗಿದೆ 

New Tax Regimeಗಾಗಿ ಇತ್ತೀಚಿನ Income Tax Slab Rateಗಳು (Finance Budget 2023-24)

Finance Budget 2023-24 ರ ಪ್ರಕಾರ, New Tax Regime ಅನ್ನು ಆಯ್ಕೆ ಮಾಡಿಕೊಂಡ employeeಗಳಿಗೆ ಇತ್ತೀಚಿನ income tax slab rateಗಳನ್ನು ಪರಿಚಯಿಸಲಾಗಿದೆ.

TallyPrime ನಲ್ಲಿ, Income Tax Computation report, Annexue II ರಿಂದ 24Q, ಮತ್ತು ಫಾರ್ಮ್-16 ಅನ್ನು ಈ ಕೆಳಗಿನವುಗಳೊಂದಿಗೆ ನವೀಕರಿಸಲಾಗಿದೆ:

  • ಇತ್ತೀಚಿನ income tax slab rateಗಳು
  • Standard deduction, ಅನ್ವಯವಾಗುವಂತೆ
  • Taxable income ರೂ. 7 ಲಕ್ಷ ಗಿಂತ ಕಡಿಮೆ ಅಥವಾ ಸಮನಾದ employeeಗಳಿಗೆ u/s 87A  ರಿಯಾಯಿತಿ ನೀಡಲಾಗುವುದು.
  • ರೂ.5 ಕೋಟಿ ಗಿಂತ ಹೆಚ್ಚಿನ taxable income ಹೊಂದಿರುವ employeeಗಳಿಗೆ 25% ರಷ್ಟು surcharge rate ಅನ್ನು ಕಡಿಮೆ ಮಾಡಲಾಗಿದೆ.
  • ರೂ.7 ಲಕ್ಷ ಗಿಂತ ಹೆಚ್ಚಿನ taxable income  ಹೊಂದಿರುವ employee ಗಳಿಗೆ ರೂ. 27,777 ಅಥವಾ ಕಡಿಮೆ ರಷ್ಟು marginal tax relief.  

ಅಷ್ಟೆ ಅಲ್ಲ, regular tax regime ವನ್ನು ಹೊಂದಿರುವ employeeಗಳಿಗೆ, tax ಲೆಕ್ಕಾಚಾರದಲ್ಲಿ  ಸ್ಪಷ್ಟತೆ ಮತ್ತು ತಿಳುವಳಿಕೆಗಾಗಿ taxable income slabಗಳನ್ನು ನಿರ್ದಿಷ್ಟ ಮೌಲ್ಯಗಳೊಂದಿಗೆ ನವೀಕರಿಸಲಾಗುತ್ತದೆ.

Product ಸುಧಾರಣೆಗಳು  – TallyPrime Release 3.0

Purchase ವೋಚರ್ ಗಳಲ್ಲಿ Tax Analysis (Composition dealers ಗಳಿಗೆ) 

Composition dealer ಗಳಿಗೆ , Purchase ವೋಚರ್ ನಲ್ಲಿ, ಈಗ Tax Analysis ವೀಕ್ಷಣೆ ಲಭ್ಯವಿದೆ

Automatic (Manual Override) ಗಳಲ್ಲಿ ಕೊನೆಯ ವೌಚೆರ್ ಸಂಖ್ಯೆಯನ್ನು alter ಮಾಡಿದಾಗ 

Automatic (Manual Override) ವೌಚೆರ್ ಸಂಖ್ಯಾ ವಿಧಾನವಿರುವ ಸಂದರ್ಭದಲ್ಲಿ, ನೀವು ವೌಚೆರ್ ಒಂದನ್ನು optional ಅಥವಾ deleted ಎಂದು ಆಯ್ಕೆ ಮಾಡಿದಾಗ, ತದನಂತರದ ವೌಚೆರ್ ಗಳಲ್ಲಿ ವೌಚೆರ್ ಸಂಖ್ಯೆಯು optional ಅಥವಾ deleted ವೌಚೆರ್ ನ ಸಂಖ್ಯೆಯನ್ನು ಪಡೆದುಕೊಳ್ಳುತ್ತಿತ್ತು 

ನೀವು ಈಗ ಸುಲಭವಾಗಿ ವೌಚೆರ್ ಸಂಖ್ಯೆಯನ್ನು ನಿಗದಿಪಡಿಸಬಹುದು ಅಥವಾ ಬದಲಾಯಿಸಬಹುದಾಗಿದೆ ಮತ್ತು ಕೊನೆಯದಾಗಿ ನಮೂದಿಸಿದ ವೌಚೆರ್ ಸಂಖ್ಯೆಯನ್ನು ಬದಲಾಯಿಸಬಹುದಾಗಿದೆ, ಇದರಿಂದ ನಿಮ್ಮ ಮುಂದಿನ ವೌಚೆರ್ ಸಂಖ್ಯೆಯನ್ನು ನಿಮಗೆ ಬೇಕಾದ ಹಾಗೆ ಮಾರ್ಪಡಿಸಬಹುದಾಗಿದೆ

ನಕಲಾದ ವೋಚರ್ ನಂಬರ್ ಅಥವಾ ಸರಬುದಾರರ ಇನ್ವಾಯ್ಸ್ ನಂಬರ್ ವೋಚರ್ ಗಳನ್ನು ಗುರುತಿಸಬಹುದು 

Uncertain Transactions (Correction Needed) ಸೆಕ್ಷನ್ ನಲ್ಲಿ Duplicate Voucher No. ಅಡಿಯಲ್ಲಿ ನಕಲಾದ ವೋಚರ್ ನಂಬರ್ ಅಥವಾ ಪೂರೈಕೆದಾರ ಇನ್ವಾಯ್ಸ್ ನಂಬರ್ ವೋಚರ್ ಗಳನ್ನು ಗುರುತಿಸಬಹುದು

ಇದಾದನಂತರ, Returns ಫೈಲ್ ಮಾಡುವ ಮುಂಚೆ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದಾಗಿದೆ

ವೌಚೆರ್ ಸಂಖ್ಯೆ ಮತ್ತು ಉಲ್ಲೇಖ ಸಂಖ್ಯೆಯನ್ನು ಬದಲಾಯಿಸಿದಾಗ

ನೀವು ವೌಚೆರ್ ವೊoದರ ದಿನಾಂಕವನ್ನು ಅನ್ನು ಬದಲಾಯಿಸಿದಾಗ, ವೌಚೆರ್ ಸಂಖ್ಯೆ ಮತ್ತು ಉಲ್ಲೇಖ ಸಂಖ್ಯೆಯು ಸಹ ಬದಲಾಗುತ್ತಿತ್ತು

ನಿಮ್ಮ ವೌಚೆರ್ ಸಂಖ್ಯೆಯ ವಿಧಾನವು Automatic ಅಥವಾ Multi-user Auto ಆಗಿದ್ದಲ್ಲಿ, ವೌಚೆರ್ ಸಂಖ್ಯೆಯನ್ನು ಹಾಗೆಯೆ ಉಳಿಸಿಕೊಳ್ಳಬಹುದಾದ ಸೌಲಭ್ಯವು ಈಗ ನಿಮಗೆ ಲಭ್ಯವಿದೆ 

Unregistered dealers ಗಳಿಗೆ ಮುಂಗಡ ರಶೀದಿ ಟ್ರಾಕಿಂಗ್

GSTR-1 ಮತ್ತು GSTR-3B ನಲ್ಲಿ Unregistered dealers ಅಥವಾ consumers ಗಳ ಮುಂಗಡ ರಸೀದಿ ಟ್ರಾಕಿಂಗ್ ಸಾಧ್ಯವಿರಲಿಲ್ಲ

ಇದನ್ನು ಸರಿಪಡಿಲಾಗಿದೆ

ಕೆಲವೊಂದು Purchase ವೌಚೆರ್ ಗಳಲ್ಲಿನ Place of Supply

ಈ ಕೆಳಗಿನವುಗಳನ್ನು ದಾಖಲು ಮಾಡಿದಾಗ ನೀವು Place of Supply ಅನ್ನು Purchase ವೌಚೆರ್  ಗಳಲ್ಲಿ ಸೇರಿಸಬಹುದಾಗಿದೆ

  • Services ಗಳನ್ನು ಸ್ಥಳೀಯವಾಗಿ ಪಡೆಯುವ ಅಂತರರಾಜ್ಯ ಪಾರ್ಟಿ 
  • ಅಂತರರಾಜ್ಯ ಪಾರ್ಟಿ ಗಳು ಸ್ಥಳೀಯವಾಗಿ ಸರಕುಗಳನ್ನು Purchase ಮಾಡಿ ಮತ್ತು ಅಂತಹುಗಳನ್ನು ಸ್ವಸ್ಥಾನಕ್ಕೆ ರವಾನಿಸುವಾಗ

Sales ನಲ್ಲಿ ಹಿಂದಿನ ಅವಧಿಯ ಮುಂಗಡ ಸ್ವೀಕೃತಿ ವಿವರ

Sales ನಲ್ಲಿ ಹಿಂದಿನ ಅವಧಿಯ ಮುಂಗಡ ಸ್ವೀಕೃತಿಯ ವಿವರ ದಾಖಲಿಸಿದಾಗ  GSTR-1 ಮತ್ತು GSTR-3B ನಲ್ಲಿ ತೋರಿಸುತ್ತಿರಲಿಲ್ಲ

ಈ ದೋಷವನ್ನು ಸರಿಪಡಿಸಲಾಗಿದೆ

ಮಾನ್ಯವಾದ GSTIN ಗಳಿದ್ದರೂ ಸಹ ಅಮಾನ್ಯ

ಕೆಲವು ಮಾನ್ಯವಾದ GSTIN ಗಳನ್ನು ಸಹ  ಅಮಾನ್ಯವೆಂದು ಪರಿಗಣಿಸಲಾಗುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

Purchase ವೌಚೆರ್ ನಲ್ಲಿ Place of Supply ಬದಲಾಯಿಸಿದಾಗ GST ಲೆಕ್ಕಾಚಾರ 

Purchase ವೌಚೆರ್ ನಲ್ಲಿ Place of Supply ಯನ್ನು Party Details ಪರದೆಯಲ್ಲಿ ಬದಲಾಯಿಸಿದಾಗ, GST ಯನ್ನು Party ledger ನಲ್ಲಿನ State ವಿವರದಂತೆಯೇ ಲೆಕ್ಕಾಚಾರ ಮಾಡಲಾಗುತಿತ್ತು.

ಈಗ  GST ಯನ್ನು ವೌಚೆರ್ ನಲ್ಲಿನ Place of Supply ನ ವಿವರದಂತೆ ಲೆಕ್ಕಾಚಾರ ಮಾಡಲಾಗುತ್ತದೆ

Sales ಇನ್ ವಾಯ್ಸ್ alteration ನಲ್ಲಿನ Partyಯ ವಿವರಗಳು

Sales ಇನ್ ವಾಯ್ಸ್ ಅನ್ನು alter ಮಾಡಿದಾಗ ಮತ್ತು Party Ledger ಅನ್ನು Cash ಎಂದು ಬದಲಾಯಿಸಿದಾಗ, Partyಯ  Registration Type, Unregistered ಎಂದು ಬದಲಾಗುತ್ತಿತ್ತು ಮತ್ತು Party Details ಪರದೆಯಿಂದ GSTIN/UIN ತೆಗೆದುಹಾಕಲಾಗುತ್ತಿತ್ತು

ಈಗ,  Party Ledgerಅನ್ನು ಬದಲಾಯಿಸಿದಾಗ, ನಿಮಗೆ ದೊರೆಯುವ ಆಯ್ಕೆಯೊಂದಿಗೆ ಮೂಲ  Partyಯ ವಿವರಗಳನ್ನು ಉಳಿಸಿಕೊಳ್ಳಬಹುದು ಅಥವಾ ಈಗ ಆಯ್ಕೆ ಮಾಡಿರುವ Partyಯ ವಿವರದೊಂದಿಗೆ ನವೀಕರಿಸಬಹುದಾಗಿದೆ

Composition dealer, ‘Registration Type’ ಕಂಪನಿಯಲ್ಲಿ Purchase ವೌಚೆರ್ ದಾಖಲು ಮಾಡಿದಾಗ Stock ಮೌಲ್ಯ ತಪ್ಪಾಗಿ ತೋರಿಸುತ್ತಿತ್ತು 

Composition dealer, ‘Registration Type’ ಕಂಪನಿಯಲ್ಲಿ ವಿವಿಧ GST ದರಗಳ stock items ಗಳನ್ನು purchase ವೌಚೆರ್ ನಲ್ಲಿ ದಾಖಲಿಸಿದಾಗ ಹಾಗೂ ಆಯಾ CGST ಮತ್ತು SGST ದರದ  ledger ಗಳನ್ನು ಸೇರ್ಪಡಿಸಿದಾಗ ಕೆಲವು stock item ಗಳ ಮೌಲ್ಯಗಳು, Stock Summary ವರದಿ ಯಲ್ಲಿ ತಪ್ಪಾಗಿ ತೋರಿಸುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

Multi-Currency ವೌಚೆರ್ ಗಳಲ್ಲಿ, Tax analysis ನ CGST ಹಾಗೂ SGST ಮತ್ತು print preview

Multi-currency ಗಳಿರುವ Sales ಇನ್ವಾಯ್ಸ್ ಗಳನ್ನು ದಾಖಲು ಮಾಡಿದಾಗ, Tax Analysis ನಲ್ಲಿ ಗೋಚರವಾಗುವ CGST ಮತ್ತು SGST, print preview ನಲ್ಲಿ ಗೋಚರವಾಗುತ್ತಿರಲಿಲ್ಲ 

ಈ ದೋಷವನ್ನು ಸರಿಪಡಿಸಲಾಗಿದೆ

Provisions ನ ಅಡಿಯಲ್ಲಿ create ಮಾಡಲಾದ ledger ಗಳಲ್ಲಿ  purchase ಗೆ ಸಂಬಂದಿಸಿದ  Natures of Transaction ಗಳು ಲಭ್ಯವಿರಲಿಲ್ಲ 

Provisions ನ ಅಡಿಯಲ್ಲಿ create ಮಾಡಲಾದ ledger ಗಳಲ್ಲಿ purchase ಗೆ ಸಂಬಂದಿಸಿದ  Natures of Transaction  ಗಳು ಲಭ್ಯವಿರಲಿಲ್ಲ 

ಈ ದೋಷವನ್ನು ಸರಿಪಡಿಸಲಾಗಿದೆ

Item ಗಳ RCM Purchases ಅನ್ನು GSTR-3B ನಲ್ಲಿ ineligible for ITC 

Input Tax Credit (ITC) ಗೆ ಅನರ್ಹ ವಾದ Item ಗಳ RCM Purchases ಗಳು GSTR-3B ಯಲ್ಲಿ D. Ineligible for Input Tax Credit section ನ ಅಡಿಯಲ್ಲಿ ತೋರಿಸುತ್ತಿರಲಿಲ್ಲ 

ಈ ದೋಷವನ್ನು ಸರಿಪಡಿಸಲಾಗಿದೆ

Composition dealer ಗಳಿಗೆ GST ವಿವರಗಳನ್ನು Stock Group ನಲ್ಲಿ ನಮೂದಿಸಬಹುದಾಗಿದೆ 

Composition dealer ಗಳು ಈಗ Stock Group ನಲ್ಲಿ GST ವಿವರಗಳನ್ನು ನಮೂದಿಸಬಹುದಾಗಿದೆ 

ಇದು ಒಂದೇ ತರಹದ GST ದರಗಳು ಹಾಗೂ GST ವಿವರಗಳನ್ನು ಒಳಗೊಂಡ Stock item ಗಳಿರುವ ಒಂದು Stock Group ಗೆ ನಮೂದು ಮಾಡಲು ಸಹಾಯ ಮಾಡುತ್ತದೆ

Composition dealers ಗಳು Stock item ನಲ್ಲಿ MRP Rate ನಮೂದಿಸಬಹುದಾಗಿದೆ

ಈಗ Composition dealer ಗಳು stock item ಗಳಲ್ಲಿ MRP Rate ಅನ್ನು ನಮೂದಿಸಬಹುದಾಗಿದೆ 

ಇನ್ವಾಯ್ಸ್ ಗಳನ್ನು voucher class ಮತ್ತು discount ಗಳೊಂದಿಗೆ ದಾಖಲು ಮಾಡಿದಾಗ CGST ಮತ್ತು SGST ಲೆಕ್ಕಾಚಾರವೂ ತಪ್ಪಾಗುತ್ತಿತ್ತು  

Discount ಹಾಗೂ voucher class ಗಳೊಂದಿಗಿನ Sales ಇನ್ವಾಯ್ಸ್ ಗಳಲ್ಲಿ CGST ಮತ್ತು SGST ಲೆಕ್ಕಾಚಾರ ತಪ್ಪಾಗುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ

Primary Group ನ ಅಡಿಯಲ್ಲಿ Ledger ಗಳನ್ನು Create ಮಾಡಿ voucher ಗಳನ್ನು ದಾಖಲು ಮಾಡಿದಾಗ GST Returns ಗಳಲ್ಲಿ ಸೇರಿಸಲಾಗುತ್ತಿರಲಿಲ್ಲ

ಕೆಲವೊಂದು ledger ಗಳ ವೌಚೆರ್ ಗಳು ಯಾವುದೇ GST Return ನಲ್ಲಿ ಸೇರಿಸಲಾಗುತ್ತಿರಲಿಲ್ಲ 

ವೌಚೆರ್ ಗಳಲ್ಲಿನ ledger ಅನ್ನು Primary group ನ ಅಡಿಯಲ್ಲಿ ಹಾಗೂ Nature of group ಅನ್ನು Income/Expense ಎಂದು ಆಯ್ಕೆ ಮಾಡಿದಂತಹ ಸಂದರ್ಭದಲ್ಲಿ ಇದು ಸಂಭವಿಸುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ

Remote company ಯಲ್ಲಿ Sales ಇನ್ವಾಯ್ಸ್ ಗಳಲ್ಲಿ GST/e-Way Bill details

Remote access ಮೂಲಕ ಸಂಪರ್ಕಿತವಾದ ಕಂಪನಿಯಲ್ಲಿ Provide GST/e-Way Bill details ಆಯ್ಕೆಯು sales ಇನ್ವಾಯ್ಸ್ ಗಳಲ್ಲಿ ಲಭ್ಯವಿರಲಿಲ್ಲ 

ಈ ದೋಷವನ್ನು ಸರಿಪಡಿಸಲಾಗಿದೆ

GSTR-1 ನಲ್ಲಿನ ಸುಧಾರಣೆಗಳು

GSTR-1 ನ Document Summary ಯಲ್ಲಿ Debit Note ಎಣಿಕೆಯು ಎರಡು ಬಾರಿ ತೋರಿಸುತ್ತಿತ್ತು

GSTR-1 ನ Document Summaryಯ ಅಡಿಯಲ್ಲಿ Invoices for Outward Supply ಮತ್ತು Debit Note section ಎರಡರಲ್ಲು Debit Note ಎಣಿಕೆಯು ತೋರಿಸುತ್ತಿತ್ತು  

ಈ ದೋಷವನ್ನು ಸರಿಪಡಿಸಲಾಗಿದೆ, ಈಗ Debit Note ಸೆಕ್ಷನ್ ನ ಅಡಿಯಲ್ಲಿ ಮಾತ್ರ ತೋರಿಸಲಾಗುತ್ತದೆ  

Document Summary ನಲ್ಲಿನ  Debit Note (Purchase Return) ಮತ್ತು Credit Note (Escalation in Purchase Price)

Debit Note (Purchase Return) ಮತ್ತು Credit Note (Escalation in Purchase Price) ವಹಿವಾಟುಗಳನ್ನು ಈಗ Document Summaryಯಲ್ಲಿ ಪರಿಗಣಿಸಲಾಗಿದೆ

Party ledgerನಲ್ಲಿ Multiple address enable ಮಾಡಿದಾಗ, ಈಗಾಗಲೇ ಲಭ್ಯವಿರುವ ಆ Partyಯ sales ಇನ್ ವಾಯ್ಸ್ ಗಳನ್ನು ಮಾರ್ಪಡಿಸಿದಾಗ, Party details ಪರದೆಯಲ್ಲಿ ‘GST Registration Type’, ‘Unregistered’ ಎಂದು ಬಡವನ್ನೆಯಾಗಿ GSTR-1 ನಲ್ಲಿ B2B ಇಂದ B2C ಗೆ ಬದಲಾಗುತ್ತಿತ್ತು

Party ledgerನಲ್ಲಿ Multiple address enable ಮಾಡಿದಾಗ, ಈಗಾಗಲೇ GSTR-1 ವರದಿಯಲ್ಲಿ B2B ಸೆಕ್ಷನ್ ನಲ್ಲಿ ಲಭ್ಯವಿದ್ದಆ Partyಯ sales ಇನ್ ವಾಯ್ಸ್ ಗಳನ್ನು ಮಾರ್ಪಡಿಸಿದಾಗ, Party details ಪರದೆಯಲ್ಲಿ ‘GST Registration Type’, ‘Unregistered’ ಎಂದು ಬದಲಾವಣೆಯಾಗಿ GSTR-1 ವರದಿಯಲ್ಲಿB2C ಸೆಕ್ಷನ್ ನಲ್ಲಿ ತೋರಿಸುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ

GSTR-1 ನಲ್ಲಿ Mismatch ಅದ  ಹಲವಾರು ಇನ್ವಾಯ್ಸ್ ಗಳ ಆಯ್ಕೆ 

GSTR-1 ನ Uncertain Transactions (Corrections Needed) ಗಳಲ್ಲಿ Nature of Transaction, Taxable value, rate of tax modified in voucher section ನಲ್ಲಿ resolve ಅಥವಾ accept as is ಮಾಡಲು ಹಲವಾರು ಇನ್ವಾಯ್ಸ್ gala ಆಯ್ಕೆಯನ್ನು ಮಾಡಲಾಗುತ್ತಿರಲಿಲ್ಲ 

Resolve ಅಥವಾ accept as is ಮಾಡಲು ಹಲವಾರು ಇನ್ವಾಯ್ಸ್ ಗಳನ್ನು ಆಯ್ಕೆ ಮಾಡಲಾಗಿ ಈ ದೋಷವನ್ನು ಸರಿಪಡಿಸಲಾಗಿದೆ

GSTR-1 ಅನ್ನು MS Excel file ನಲ್ಲಿ export ಮಾಡಿದಾಗ  Dadra & Nagar Haveli and Daman & Diu state code

GSTR-1 ಅನ್ನು MS Excel file ನಲ್ಲಿ export ಮಾಡಿದಾಗ Dadra & Nagar Haveli and Daman & Diu State code ಲಭ್ಯವಿರಲಿಲ್ಲ 

ಇದು B2C ಇನ್ವಾಯ್ಸ್ ಗಳನ್ನು Unregistered dealer ಅಥವಾ e-commerce operator ಗಳಿಗೆ  ದಾಖಲು ಮಾಡಿದಾಗ ಸಂಭವಿಸುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ

GSTR-3B ನಲ್ಲಿನ ಸುಧಾರಣೆಗಳು

Capital Goods ನ ಆಮದು

Capital Goods ನ ಆಮದು ವಹಿವಾಟುಗಳನ್ನು ದಾಖಲು ಮಾಡಿದಾಗ Import of Goods ಸೆಕ್ಷನ್ ನ ಅಡಿಯಲ್ಲಿ ತೋರಿಸುತ್ತಿರಲಿಲ್ಲ

ಅಂತಹ ವಹಿವಾಟುಗಳನ್ನು No direct implications in return tables ಸೆಕ್ಷನ್ ಅಡಿಯಲ್ಲಿ ತೋರಿಸುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

ಒಂದೇ ತಿಂಗಳಿನ RCM Purchase ಗಳಿಗೆ Stat Adjustment ವಹಿವಾಟುಗಳಲ್ಲಿನ  Taxable Amount 

GSTR-3B ನಲ್ಲಿನ 3.1 (d) Inward supplies (liable to reverse charge) ಸೆಕ್ಷನ್ ನ Taxable Amount  ಕಾಲಂ ನಲ್ಲಿ ಮೌಲ್ಯವನ್ನು ತೋರಿಸುತ್ತಿರಲಿಲ್ಲ

RCM Purchase ವೌಚೆರ್ ಮತ್ತು Journal ವೌಚೆರ್ ನಲ್ಲಿ Increase of Tax Liability & Input Tax Credit ಆಯ್ಕೆ ಮಾಡಿ, ಅದೇ ತಿಂಗಳಲ್ಲಿ ನಮೂದಿಸಿದಾಗ ಸಂಭವಿಸುತ್ತದೆ

ಒಂದೇ Return ಅವಧಿಯಲ್ಲಿ Increase of Tax Liability & Input Tax Credit ಆಯ್ಕೆ ಮಾಡಿ  Journal ವೌಚೆರ್ ಅನ್ನು ಮತ್ತು RCM Purchase ವೌಚೆರ್ ವಹಿವಾಟನ್ನು ನಮೂದಿಸಿದಾಗ ಇದು ಸಂಭವಿಸುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

GSTR-3B ನಲ್ಲಿನ Uncertain Transactions

Sales and Purchase ನಲ್ಲಿನ uncertain transactions ಗಳನ್ನು ಈಗ GSTR-1 and GSTR-2A  ಜೊತೆಗೆ GSTR-3B ಯಲ್ಲಿಯೂ ತೋರಿಸುತ್ತದೆ

RCM Purchases ಮೇಲಿನ GST, GSTR-3B ಯಲ್ಲಿ ತೋರಿಸುತ್ತಿರಲಿಲ್ಲ

RCM Purchase ಮತ್ತು Input Tax Credit ಗಳಿಗೆ Liabilities ಗಳನ್ನು ದಾಖಲಿಸಿದಾಗ GSTR-3B ನಲ್ಲಿ ತೋರಿಸುತ್ತಿರಲಿಲ್ಲ

RCM liability ಗಾಗಿ RCM purchase ವಹಿವಾಟುಗಳನ್ನು ಮತ್ತು Input Tax Credit ಗೆ  ಸಂಬಂದಿಸಿದ Purchase ಅನ್ನು ಒಂದೇ Return ಅವಧಿಯಲ್ಲಿ ದಾಖಲಿಸಿದಾಗ ಇದು ಸಂಭವಿಸುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

Return ವರದಿಗಳಲ್ಲಿ Purchase ನ ನೆಗೆಟಿವ್ ಮೌಲ್ಯ ನಿರ್ವಹಣೆ 

JSON file ಅನ್ನು Sales ಅಥವಾ Purchase ನಲ್ಲಿ ನೆಗೆಟಿವ್ ಮೌಲ್ಯದೊಂದಿಗೆ upload ಮಾಡಿದಾಗ, GST ಪೋರ್ಟಲ್ ನಲ್ಲಿ error ತೋರಿಸುತ್ತಿತ್ತು

Return Effective Date ನಂತಹ ಹೊಸ ಸೌಲಭ್ಯದಿಂದ, ಈ ತರಹದ ವಹಿವಾಟುಗಳನ್ನು, ಬೇರೊಂದು return period ಗೆ ವರ್ಗಾಹಿಸಬಹುದಾಗಿದೆ, ಮತ್ತು ಯಾವುದೇ Return Period ನಲ್ಲೂ Sales ಅಥವಾ Purchase ನಲ್ಲಿ ನೆಗೆಟಿವ್ ಮೌಲ್ಯವಿಲ್ಲ ಎಂಬುದನ್ನು ಖಾತರಿಗೊಳಿಸಬಹುದಾಗಿದೆ  

GSTR-3B ವರದಿಯಲ್ಲಿ, Input Tax Credit Reversed ಸೆಕ್ಷನ್ ನ ಅಡಿಯಲ್ಲಿ Reversal of ITC Reclaim ತೋರಿಸುತ್ತಿರಲಿಲ್ಲ

GSTR-3B ವರದಿಯಲ್ಲಿ, Input Tax Credit Reversed ಸೆಕ್ಷನ್ ನ Others ನ ಅಡಿಯಲ್ಲಿ Reversal of ITC  Reclaim (On Account of Buyer Payment) ತೋರಿಸುತ್ತಿರಲಿಲ್ಲ

ಈ ದೋಷವನ್ನು ಸರಿಪಡಿಸಲಾಗಿದೆ

Exempt/Nil-rated and Taxable items ಗಳನ್ನು ಒಳಗೊಂಡ Invoice ನಲ್ಲಿ Error

GSTR-3B ಫೈಲಿಂಗ್ ಮಾಡುವ ಸಂದರ್ಭ ದಲ್ಲಿ Invoice, Exempt/Nil-rated ಮತ್ತು  Taxable items ಗಳನ್ನು ಹೊಂದಿದ್ದಾರೆ ಈ ಕೆಳಕಂಡ Error ತೋರಿಸುತ್ತಿತ್ತು

ಇದನ್ನು ಸರಿಪಡಿಲಾಗಿದೆ

GSTR-3B ನಲ್ಲಿ vouchers as is ಗಳನ್ನು ಸರಿಪಡಿಸಿ  ಮತ್ತು accept ಮಾಡಿದಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು

GSTR-3B ನಲ್ಲಿ voucher as is ಗಳನ್ನು ಸರಿಪಡಿಸಿ, ಪರಿಹರಿಸಿದಾಗ ಬಹಳಷ್ಟ್ರು samaya ತೆಗೆದುಕೊಳ್ಳುತ್ತಿತ್ತು ವಿಶೇಷವಾಗಿ Uncertain Transactions (Corrections Needed) ಗಳಲ್ಲಿ

ಈಗ voucher as is ಗಳನ್ನು ಸರಿಪಡಿಸಿ, ಪರಿಹರಿಸಿದಾಗ ಗಮನಾರ್ಹವಾಗಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ 

Direct Expenses ಗೆ ಸಂಬಂದಿಸಿದ ವಹಿವಾಟುಗಳನ್ನು GSTR-3B ನಲ್ಲಿ ಸೇರಿಸಲಾಗುತ್ತಿರಲಿಲ್ಲ

Direct Expenses group ಗೆ ಸಂಬಂದಿಸಿದ ವಹಿವಾಟುಗಳನ್ನು GSTR-3B ನಲ್ಲಿ Not relevant for Return ನಲ್ಲಿ ಪರಿಗಣಿಸಲಾಗುತ್ತಿತ್ತು. ಇವುಗಳನ್ನು ಈಗ  GSTR-3B ಯಲ್ಲಿ Included in Return ನಲ್ಲಿ ಪರಿಗಣಿಸಲಾಗುತ್ತಿದೆ 

GSTR-2A Reconciliation ನಲ್ಲಿನ ಸುಧಾರಣೆಗಳು

Current Liabilities ಅಡಿಯಲ್ಲಿ create ಮಾಡಲಾದ ledger ವೌಚೆರ್ ಗಳ reconciliation

ವಹಿವಾಟುಗಳ ಎಲ್ಲ ಮೌಲ್ಯಗಳು portal data ದೊಂದಿಗೆ match ಆಗಿದ್ದರು ಸಹ ಕೆಲವೊಂದು  ವಹಿವಾಟುಗಳು ಸ್ವಯಂ ಚಾಲಿತವಾಗಿ reconcile ಆಗುತ್ತಿರಲಿಲ್ಲ. ವಹಿವಾಟುಗಳ್ಳಲ್ಲಿ current liabilities ಅಡಿಯಲ್ಲಿ ಪಾರ್ಟಿ ledger ಅನ್ನು create ಮಾಡಿದಾಗ ಇದು ಸಂಭವಿಸುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ

Reconcillition ನಲ್ಲಿ GST Status ಅನ್ನು ಕೈಯಾರೆ ಗುರುತು ಮಾಡಲು ಆಗುತ್ತಿರಲಿಲ್ಲ

Import ಮಾಡಲಾದ ವಹಿವಾಟುಗಳನ್ನು ಕೈಯಾರೆ (manually) reconcilled ಎಂದು ಗುರುತು ಮಾಡಲು ಆಗುತ್ತಿರಲಿಲ್ಲ  

ಈ ದೋಷವನ್ನು ಸರಿಪಡಿಸಲಾಗಿದೆ. GST Status ನಿಗದಿಪಡಿಸುವಿಕೆ ಸೌಲಭ್ಯವು ಅನಿಯಮಿತವಾಗಿದೆ. 

ಯಾವುದೇ ಅವಧಿಯ transactions ಗಳನ್ನು reconciliation ಗೆ ಪರಿಗಣಿಸಬಹುದು 

ಈಗ  TallyPrime ನಲ್ಲಿ ಯಾವುದೇ ಅವಧಿಯ transactions ಗಳನ್ನು GSTR -2A ನಲ್ಲಿ reconciliation ಗೆ ಪರಿಗಣಿಸಬಹುದು

ಪ್ರಸ್ತುತ ರಿಟರ್ನ್ ನಲ್ಲಿ ಹಿಂದಿನ ಹಣಕಾಸು ವರ್ಷದ Purchase ವೌಚೆರ್ 

GSTR-2A Reconciliation ನಲ್ಲಿ ಹಿಂದಿನ ಹಣಕಾಸು ವರ್ಷದ Purchase ವೌಚೆರ್ ಗಳು ಪ್ರಸ್ತುತ ಹಣಕಾಸು ವರ್ಷ ದಲ್ಲಿ ತೋರಿಸುತ್ತಿತ್ತು

ನೀವು Supplier Invoice Nos ಅನ್ನು ನಮೂದಿಸಿದಾಗ ಹಾಗೂ ಇದೇ Supplier Invoice Nos ಅನ್ನು ಹಿಂದಿನ ಹಣಕಾಸು ವರ್ಷದಲ್ಲಿ ಇದೇ party ಗೆ  ನಮೂದಿಸಿದ ಸಂದರ್ಭದಲ್ಲಿ ಸಂಭವಿಸುತ್ತದೆ 

ಇದನ್ನು ಸರಿಪಡಿಲಾಗಿದೆ

Nil rated ಗಳಿರುವ ವಹಿವಾಟುಗಳನ್ನು ಮತ್ತೆ save ಮಾಡಿದಾಗೆ GSTR-2A ನಲ್ಲಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ 

GSTR-2A ನಲ್ಲಿ Nil Rated stock Item ಅಥವಾ ledger ಗಳಿರುವ ವಹಿವಾಟುಗಳನ್ನು ಮತ್ತೆ  save ಮಾಡಿದಾಗೆ ಬಹಳಷ್ಟ್ರು ಸಮಯ ತೆಗೆದುಕೊಳ್ಳುತ್ತಿತ್ತು 

ಈಗ ಇದು ಗಮನಾರ್ಹವಾಗಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ 

GSTR-4 ನಲ್ಲಿನ ಸುಧಾರಣೆಗಳು 

GSTR-4 ನಲ್ಲಿನ Sales ಇನ್ ವಾಯ್ಸ್ ಗಳು 

GSTR-4 ನಲ್ಲಿ ಕೆಲವು Sales ಇನ್ ವಾಯ್ಸ್ ಗಳು Included in Return ಮತ್ತು Not Relevant for This Return  ಎರಡು ಸೆಕ್ಷನ್ ಗಳಲ್ಲೂ ತೋರಿಸುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ

GSTR-4 ನಲ್ಲಿ Unregistered ಪಾರ್ಟಿಯ  RCM purchase ಗಳನ್ನು ಸೇರಿಸಲಾಗುತ್ತಿರಲಿಲ್ಲ

Unregistered ಪಾರ್ಟಿಯ RCM purchase ವಹಿವಾಟುಗಳನ್ನು ದಾಖಲು ಮಾಡಿದಾಗ GSTR-4 ನಲ್ಲಿ Not relevant ಎಂದು ಪರಿಗಣಿಸುತ್ತಿತ್ತು. ಈಗ ಈ ವಹಿವಾಟುಗಳನ್ನು included in the Return ಎಂದು ಪರಿಗಣಿಸುತ್ತದೆ

GSTR-4 worksheet 4A&B (B2) ನಲ್ಲಿ ತಪ್ಪಾದ Place of Supply

ನೀವು GSTR-4 ಅನ್ನು ಇಲಾಖೆ ಒದಗಿಸಿದ MS Excel template ನಲ್ಲಿ export ಮಾಡಿದಾಗ, 4A&B (B2B) Worksheet ನಲ್ಲಿ Place of Supply ತಪ್ಪಾಗಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

e-Way bill ನಲ್ಲಿ ವಹಿವಾಟುಗಳನ್ನು exclude ಮಾಡುವಿಕೆ 

e-Way bill ನಲ್ಲಿ user-excluded ವಹಿವಾಟುಗಳು e-Invoice ನಿಂದಲೂ exclude ಆಗುತ್ತಿತ್ತು 

ಕೆಲವೊಂದು ವೌಚೆರ್ ಗಳು e-Invoice ನಲ್ಲಿ exclude ಆಗುತ್ತಿತ್ತು

ಇದು e-Way bill ವರದಿಯಲ್ಲಿನ User-excluded Transactions (Not relevant) ವೌಚೆರ್ ಗಳಲ್ಲಿ ಸಂಭವಿಸುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

e-Way Bill ವರದಿಯಲ್ಲಿ exclude ಮಾಡಲು ಆಯ್ಕೆ ಮಾಡಿದ ಎಲ್ಲಾ ವಹಿವಾಟುಗಳು exclude ಆಗುತ್ತಿರಲಿಲ್ಲ

ನೀವು e-Way bill ವರದಿಯಲ್ಲಿ Missing/Invalid Information section ನಲ್ಲಿ ಆಯ್ಕೆ ಮಾಡಲಾದ ಎಲ್ಲಾ ಇನ್ವಾಯ್ಸ್ ಗಳು exclude ಮಾಡಲಾಗುತ್ತಿರಲಿಲ್ಲ 

ಬಹಳಷ್ಟ್ರು ಇನ್ವಾಯ್ಸ್ ಗಳಿದ್ದು ಅವುಗಳನ್ನು ಒಂದೇ ಬಾರಿಗೆ exclude ಮಾಡಬೇಕಾದಾಗ ಸಂದರ್ಭದಲ್ಲಿ ಇದು ಸಂಭವಿಸುತ್ತಿತ್ತು 

ಈ ದೋಷವನ್ನು ಸರಿಪಡಿಸಲಾಗಿದೆ. ಈಗ ನೀನು e-way bill ವಾರದಿಯಲ್ಲಿ ಅನೇಕ invoice ಗಲನ್ನು ಬಹಿಷ್ಕರಿಸಿ ಮದಬಾಹುದಾಗಿದೆ

Delete ಮಾಡಲಾದ ವೌಚೆರ್ Modified  ಎಂದು ತೋರಿಸಲಾಗುತ್ತಿತ್ತು 

E-Invoice ವರದಿಯಲ್ಲಿ Voucher Information Mismatch with QR Code ಸೆಕ್ಷನ್ ಅಡಿಯಲ್ಲಿ ವೌಚೆರ್ ದಿನಾಂಕ ಮತ್ತು e-Invoice ಗೆ ಸಂಬಂದಿತ ವಿವರಗಳಿಲ್ಲದೆ Delete ಮಾಡಲಾದ ವೌಚೆರ್ Modified  ಎಂದು ತೋರಿಸಲಾಗುತ್ತಿತ್ತು 

Delete ಮಾಡಲಾದ ವೌಚೆರ್ Deleted ಎಂದು ಮತ್ತು e-Invoice ವಿವರಗಳ್ಳನ್ನು ಹಾಗೆಯೇ ಉಳಿಸಿಕೊಂಡು ಇದನ್ನು ಸರಿಪಡಿಸಲಾಗಿದೆ

Data Split ಮಾಡುವಾಗ MAV error ಸಂಭವಿಸುತ್ತಿತ್ತು 

Data split ಮಾಡುವಾಗ ಕೆಲವೊಂದು ಸಂದರ್ಭಗಳಲ್ಲಿ,  Memory Access Violation (MAV) error  ಸಂಭವಿಸುತ್ತಿತ್ತು

ಈ ದೋಷವನ್ನು ಸರಿಪಡಿಸಲಾಗಿದೆ

TallyHelpwhatsAppbanner
Is this information useful?
YesNo
Helpful?
/* */