Explore Categories

 

 PDF

TallyPrime ಮತ್ತು TallyPrime Edit Log Release 2.1 ರಿಲೀಸ್ ನೋಟ್ಸ್ | TallyPrime ನಲ್ಲಿ ಹೊಸದೇನಿದೆ ತಿಳಿಯಿರಿ

ನಿಮ್ಮ ಸಮಗ್ರ e-invoicing ಮತ್ತು GST ರಿಟರ್ನ್ ಫೈಲಿಂಗ್ ಅನುಭವವನ್ನು ಮತ್ತಷ್ಟು ಮೆರಗುಗೊಳಿಸಲು ಉತ್ತಮವಾದ ಸುಧಾರಣೆಗಳೊಂದಿಗೆ TallyPrime Release 3.0.1 ಬರುತ್ತಿದೆ.

e-Invoice Report ನಲ್ಲಿ ಈಗ ಇನ್ನು ಹೆಚ್ಚಿನ ಸಮಸ್ಯೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪರಿಹರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ portal ನಲ್ಲಿ reject ಆಗುವ ವೋಚರ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ, GSTಯಲ್ಲಿನ Export ಮತ್ತು HSN/SAC ಸುಧಾರಣೆಗಳು  ನಿಮ್ಮ ಅನುಭವವನ್ನು ಮತ್ತಷ್ಟು ಸಂತೋಷಗೊಳಿಸುತ್ತದೆ.

ನೀವು TallyPrime ನಲ್ಲಿ customisation ಬಳಸುತ್ತಿದ್ದರೆ, ಇತ್ತೀಚಿನ ಬಿಡುಗಡೆಗೆ ಅಪ್‌ಗ್ರೇಡ್ ಮಾಡುವ ಮೊದಲು ನಿಮ್ಮ partnerರನ್ನು ಸಂಪರ್ಕಿಸುವುದು ಉತ್ತಮ.
ನೀವು multi-user ಸೆಟಪ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮೊದಲು ಸರ್ವರ್‌ನಲ್ಲಿ ಮತ್ತು ನಂತರ ಕ್ಲೈಂಟ್‌ನಲ್ಲಿ ಅಪ್‌ಗ್ರೇಡ್ ಮಾಡಿ.

e-Invoicing

ಈಗ e-Invoicing ನಲ್ಲಿನ ಈ ಕೆಳಗಿನ ಸುಧಾರಣೆಗಳೊಂದಿಗೆ ನಿಮ್ಮ e-Invoicing ಅನುಭವವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. 

e-Invoicing ವಿವರಗಳನ್ನು ಸುಲಭವಾಗಿ ಸರಿಪಡಿಸಬಹುದಾಗಿದೆ

ನೀವು ಈಗ e-Invoice ಗಳನ್ನು ರಚಿಸುವಾಗ ಯಾವುದಾದರು ಸಮಸ್ಯೆಗಳಿದ್ದಲ್ಲಿ ಅಥವಾ ಕೆಲವು ವಿವರಗಳು ತಪ್ಪಿಹೋಗಿದ್ದಲ್ಲಿ, ಅಂತಹವುಗಳನ್ನು ಬಹಳ ಸುಲಭವಾಗಿ  ಹುಡುಕಬಹುದಾಗಿದೆ. e-Invoice report ನ ಅಗತ್ಯ ತಿದ್ದುಪಡಿಗಳನ್ನು TallyPrime ನಲ್ಲಿಯೇ ಮಾಡಲು ಸಹಾಯ ಮಾಡುತ್ತದೆ ಮತ್ತು e-invoice portal ನಲ್ಲಿನ rejections ಗಳನ್ನು ತಪ್ಪಿಸಬಹುದಾಗಿದೆ.

ನೀವು ಈಗ Uncertain Transactions ಗಳಲ್ಲಿನ ಈ ಕೆಳಗಿನ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು:

      • Consignee (Ship To) ಮತ್ತು Dispatch From ರಲ್ಲಿ ರಾಜ್ಯದ ಹೆಸರು ಇಲ್ಲದೆಯಿರುವುದು  ಅಥವಾ ಅಮಾನ್ಯವಾಗಿರುವುದು
      • ರಾಜ್ಯ ಮತ್ತು ಪಿನ್‌ಕೋಡ್ ನಡುವೆ ಹೊಂದಾಣಿಕೆಯಿಲ್ಲದಿರುವುದು
      • HSN ಮತ್ತು Type of supply ನಡುವೆ ಹೊಂದಾಣಿಕೆಯಿಲ್ಲದಿರುವುದು
      • ಸೊನ್ನೆಯಿಂದ ಪ್ರಾರಂಭವಾಗುವ invoice ಸಂಖ್ಯೆಗಳು

ಇನ್ನು ಹೆಚ್ಚಿನ ಮಾಹಿತಿಗಾಗಿ e-Invoice – FAQ ನಲ್ಲಿ e-Invoice Reports ವಿಭಾಗವನ್ನು ನೋಡಿ.

Billed Quantity ಮತ್ತು Actual Quantity ಗಳೊಂದಿಗೆ e-Invoicing

ನೀವು ಈಗ e-Invoicing ಅನ್ನುBilled Quantity ಮತ್ತು Actual Quantity ಗಳೊಂದಿಗೆ ತಡೆರಹಿತವಾಗಿ ನಿರ್ವಹಿಸಬಹುದು. 

ನಿಮ್ಮ ವಹಿವಾಟುಗಳಲ್ಲಿ Billed Quantity ಯು Actual Quantity ಗಿಂತಲೂ  ಹೆಚ್ಚಾಗಿದ್ದಲ್ಲಿ, e-invoice ರಚಿಸುವಾಗ  ಯಾವುದೇ ಸಮಸ್ಯೆಗಳಾಗುವುದಿಲ್ಲ 

ವಿದೇಶಿ party ಗಳಿಗೆ e-Invoicing

ವಿದೇಶಿ party ಗಳಿಗೆ  e-Invoice ರಚಿಸುವುದು ಈಗ ಮತ್ತಷ್ಟು ಸುಲಲಿತವಾಗಿದೆ 

ನೀವು ಭಾರತದ ಹೊರಗಿರುವ party ಗಳಿಗೆ ಸೇವೆಯನ್ನು ಒದಗಿಸಿ, ಸ್ಥಳೀಯ ಅಥವಾ ಅಂತರ ರಾಜ್ಯ party ಗಳಿಗೆ  ಬಿಲ್ ಮಾಡಿ,  e-invoice ರಚಿಸುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ .

e-Invoice ನಲ್ಲಿನ Dispatch From Details

E-Invoice ವಹಿವಾಟುಗಳನ್ನು ರಚಿಸುವಾಗ, Dispatch From ವಿವರಗಳು ಈಗ ಮತ್ತಷ್ಟು ಸ್ಪಷ್ಟತೆಯೊಂದಿಗೆ ಪ್ರದರ್ಶಿಸಲಾಗುತ್ತವೆ.

ನೀವು ಒಮ್ಮೆProvide Dispatch From details ಅನ್ನು ಸಕ್ರಿಯಗೊಳಿಸಿದ ನಂತರ ನೀವು ತದ ನಂತರದ ವಹಿವಾಟುಗಳಲ್ಲಿ ಈ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ನವೀಕರಿಸಬಹುದಾಗಿದೆ

E-Invoice ಜೊತೆಗೆ e-Way Bill

E-invoice ಜೊತೆಗೆ e-way bill ರಚಿಸುವುದು ಈಗ ಮತ್ತಷ್ಟು ಸುಲಭವಾಗಿದೆ.

Credit Note ಮತ್ತು ಮಿತಿಗಿಂತಲೂ ಕಡಿಮೆಯಿರುವ  ವಹಿವಾಟುಗಳ e-Way Bill ಗಳನ್ನು ಸುಲಲಿತವಾಗಿ generate ಮಾಡಬಹುದಾಗಿದೆ

UoM ಗಳಿಲ್ಲದ Stock item ಗಳ e-invoicing

e-Invoice ಗಳಲ್ಲಿ UoM ಗಳಿಲ್ಲದ Stock item ಅನ್ನು ನಿರ್ವಹಿಸುವುದು ಈಗ ಮತ್ತಷ್ಟು ಸುಲಭವಾಗಿದೆ  

UoM ಬಳಕೆ  ಮಾಡದ  Stock item ಗಳಿದ್ದರು ಸಹ ನೀವು ತಡೆರಹಿತವಾಗಿ  ಸರಕು  ಮತ್ತು ಸೇವೆಗಳಿಗೆ  e-invoice ಗಳನ್ನು generate ಮಾಡಬಹುದಾಗಿದೆ

Party GSTIN/UIN ಮತ್ತು Company GSTIN/UIN ಒಂದೇ ಆಗಿದ್ದಲ್ಲಿ

ನಿಮ್ಮ party GSTIN/UIN ಮತ್ತು company GSTIN/UIN ಒಂದೇ ಆಗಿದೆಯೇ ? ತೊಂದರೆಯಿಲ್ಲ! ಈಗ ನೀವು ಈ ತರಹದ ವಹಿವಾಟುಗಳನ್ನು ಯಾವುದೇ ತಡೆಯಿಲ್ಲದೆ portal ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ

ನೀವು Uncertain Transactions ನಲ್ಲಿ Party GSTIN/UIN is the same as Company GSTIN/UIN ವಿಭಾಗದಲ್ಲಿರುವ ಸಂಬಂಧಿತ ವಹಿವಾಟುಗಳನ್ನು upload ಮಾಡಲು ಸಿದ್ಧವಾಗಿವೆ ಎಂದು ಒಪ್ಪಿಕೊಳ್ಳಬೇಕು. ತದನಂತರ ನಿಮ್ಮ ವಹಿವಾಟುಗಳು upload ಮಾಡಲು ಸಿದ್ಧವಾಗಿರುತ್ತದೆ

ಇನ್ನು ಹೆಚ್ಚಿನ ಮಾಹಿತಿಗಾಗಿ e-Invoice – FAQ ನಲ್ಲಿ e-Invoice Reports ವಿಭಾಗವನ್ನು ನೋಡಿ.

GST

ಈಗ GST ಮಾಡ್ಯೂಲ್ ನಲ್ಲಿ ಈ ಕೆಳಗಿನ ಸುಧಾರಣೆಗಳೊಂದಿಗೆ  ನಿಮ್ಮ ರಿಟರ್ನ್ ಫೈಲಿಂಗ್ ಅನುಭವವನ್ನು ಮತ್ತಷ್ಟು  ಹೆಚ್ಚಿಸುತ್ತದೆ

HSN/SAC ಕೋಡ್ ಅನ್ನು ನಮೂದಿಸದೆಯಿದ್ದಲ್ಲಿ Accept As Is ಮಾಡಿ 

ನಿಮ್ಮ ವ್ಯಾಪಾರದ ವಾರ್ಷಿಕ ವಹಿವಾಟು 5 ಕೋಟಿಗಿಂತ ಕಡಿಮೆಯಿದ್ದಲ್ಲಿ, HSN/SAC ವಿವರಗಳನ್ನು ನಮೂದಿಸುವುದು ಐಚ್ಛಿಕವಾಗಿರುತ್ತದೆ. ಇಂತಹ ವಹಿವಾಟುಗಳನ್ನು ಪರಿಗಣಿಸಿ ಒಪ್ಪಿಕೊಂಡು  (Uncertain Transactions ನಿಂದ ) ವರದಿಗಳಲ್ಲಿ ಒಳಗೊಂಡಿರುವಂತೆ ಪರಿಗಣಿಸಲು, TallyPrime ನಿಮಗೆ ಅದ್ಭುತವಾದ ನಮ್ಯತೆಯನ್ನು ಒದಗಿಸುತ್ತದೆ.

JSON ಬಳಸಿ GSTR-3B ಫೈಲಿಂಗ್ ಮಾಡುವುದು ಈಗ ಮತ್ತಷ್ಟು ಸುಗಮವಾಗಿದೆ.

TallyPrime ನಿಂದ export ಮಾಡಲಾದ GSTR-3B JSON ಈಗ ಎಲ್ಲಾ ವಿಭಾಗಗಳ ಮತ್ತು ವಹಿವಾಟುಗಳ ವಿವರಗಳನ್ನು ಒಳಗೊಂಡಿರುತ್ತದೆ. Zero-valued ವಿಭಾಗಗಳನ್ನು ಸಹ  ತಡೆರಹಿತವಾಗಿ  export ಮಾಡಲಾಗುತ್ತದೆ, ಇದರಿಂದ ನಿಮ್ಮ ಅಗತ್ಯಕ್ಕೆ ತಕ್ಕಂತೆ  portal ನಲ್ಲಿ ಮೌಲ್ಯಗಳನ್ನು ನವೀಕರಿಸಬಹುದು.

Post a Comment

Is this information useful?
YesNo
Helpful?