HomeTallyPrimeWhat's New | Release NotesRelease 4.1 - ಕನ್ನಡ

 

Explore Categories

 

 PDF

TallyPrime ಮತ್ತು TallyPrime Edit Log Release 4.1 ಗೆ ಸಂಬಂಧಿಸಿದ ರಿಲೀಸ್ ನೋಟ್ಸ್ | ಹೊಸ ವಿಷಯಗಳನ್ನು ತಿಳಿದುಕೊಳ್ಳಿ!

TallyPrime ಮತ್ತು TallyPrime Edit Log Release 4.1 ಕೆಳಗಿನವುಗಳೊಂದಿಗೆ ನಿಮಗೆ ಹೆಚ್ಚಿನ ಸಂತೋಷವನ್ನು ತರುತ್ತದೆ:

  • ಕಂಪನಿ ಮತ್ತು ಅದರ MSME ಸರಬರಾಜುದಾರರಿಗೆ MSME UDYAM Number ಅನ್ನು ನವೀಕರಿಸವ ನಿಬಂಧನೆ. MSME ಸರಬರಾಜುದಾರರಿಗೆ ಪಾವತಿಸದ ಎಲ್ಲಾ ಬಿಲ್‌ಗಳ ವಿವರಗಳನ್ನು ತ್ವರಿತವಾಗಿ ಸಂಗ್ರಹಿಸಲು ಮತ್ತು ಆದಾಯ ತೆರಿಗೆ ಕಾಯಿದೆಯ ವಿಭಾಗ 43b(h) ಅನ್ನು ಸುಲಭವಾಗಿ ಅನುಸರಿಸಲು ಆಯ್ಕೆಯನ್ನು ಹೊಂದಿದೆ.
  • GSTR-1 ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಪ್ರಕಾರ, ರಿಟರ್ನ್ ಅವಧಿಯಲ್ಲಿ ಎಲ್ಲಾ ಆನ್‌ಲೈನ್ ಮಾರಾಟಗಳನ್ನು ಪಟ್ಟಿ ಮಾಡುವ ಸೌಲಭ್ಯ.

MSME

ಹೊಸ MSME ವೈಶಿಷ್ಟ್ಯದೊಂದಿಗೆ, MSME ಗಳು ಮತ್ತು MSMEಗಳೊಂದಿಗೆ ವ್ಯಾಪಾರ ಮಾಡುವ ವ್ಯವಹಾರಗಳು MSME status ನ್ನು ಗುರುತಿಸಬಹುದು ಮತ್ತು ಸಕಾಲಿಕ ಪಾವತಿಗಳಿಗಾಗಿ ಬಾಕಿ ಇರುವ ಬಿಲ್‌ಗಳನ್ನು ಟ್ರ್ಯಾಕ್ ಮಾಡಬಹುದು. ಇದಲ್ಲದೆ, MSMEಗಳಿಂದ ಖರೀದಿದಾರರು ತಮ್ಮ ಮಿತಿಮೀರಿದ MSME ಪಾವತಿಗಳ ಸಂಪೂರ್ಣ ವಿವರಗಳೊಂದಿಗೆ ತ್ವರಿತವಾಗಿ Form MSME 1 ಅನ್ನು ಫೈಲ್ ಮಾಡಬಹುದು. ಆದಾಯ ತೆರಿಗೆ ಕಾಯಿದೆಯ 43b(h) ಅನ್ನು ಅನುಸರಿಸಲು, ಖರೀದಿದಾರನು ಅಲ್ಪಸಮಯದಲ್ಲಿ ಅನುಮತಿಸದ ಬಿಲ್‌ಗಳ ಪಟ್ಟಿಯನ್ನು ರಚಿಸಬಹುದು.

Registered MSME ವ್ಯವಹಾರಗಳು ಕೆಳಗಿನವುಗಳನ್ನು ಮಾಡಬಹುದು:

  • MSME ಇಲಾಖೆಯಿಂದ ಪಡೆದ UDYAM ನೋಂದಣಿ ವಿವರಗಳನ್ನು ಹೊಂದಿಸಬಹುದು. ಅವರು ಈ ವಿವರಗಳನ್ನು ಬದಲಾಯಿಸಬಹುದು ಮತ್ತು ಅನ್ವಯವಾಗುವ ದಿನಾಂಕಗಳ ಜೊತೆಗೆ ಅಂತಹ ಎಲ್ಲಾ ಬದಲಾವಣೆಗಳನ್ನು ಟ್ರ್ಯಾಕ್ ಮಾಡಬಹುದು.
  • ನಿಮ್ಮ MSME status ಬಗ್ಗೆ ಖರೀದಿದಾರರಿಗೆ ತಿಳಿಸಲು UDYAM ನೋಂದಣಿ ವಿವರಗಳೊಂದಿಗೆ ಇನ್‌ವಾಯ್ಸ್‌ಗಳನ್ನು ಮುದ್ರಿಸಬಹುದು
  • ಬಾಕಿ ಇರುವ ಅಥವಾ ವ್ಯವಾದಿ ಮೀರಿ ಬಾಕಿ ಇರುವ ಸ್ವೀಕೃತಿಗಳ ವಿವರಗಳನ್ನು ತ್ವರಿತವಾಗಿ ಪಡೆಯಿರಿ ಮತ್ತು ಸಮಯಕ್ಕೆ ಪಾವತಿಗಳನ್ನು ಸ್ವೀಕರಿಸಲು ಜ್ಞಾಪನೆಗಳನ್ನು ಕಳುಹಿಸಿ.

MSMEಗಳೊಂದಿಗೆ ವ್ಯಾಪಾರ ಮಾಡುವ ವ್ಯವಹಾರಗಳು ಕೆಳಗಿನವುಗಳನ್ನು ಮಾಡಬಹುದು:

  • ಸರಬರಾಜುದಾರರ MSME status ಅನ್ನು ಸೆಟಪ್ ಮಾಡಿ
  • ಬಡ್ಡಿಯನ್ನು ತಪ್ಪಿಸಲು MSMEಗಳ ಬಿಲ್‌ಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಗದಿತ ದಿನಾಂಕದ ಮೊದಲೇ ಪಾವತಿಗಳನ್ನು ಮಾಡಬಹುದು.
  • ಅವಧಿ ಮೀರಿದ ಬಿಲ್‌ಗಳೊಂದಿಗೆ MSME ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಿರಿ ಮತ್ತು ಅದನ್ನು Form MSME-1 ನಲ್ಲಿ ವರದಿ ಮಾಡಿ.
  • ಆದಾಯ ತೆರಿಗೆ ಕಾಯಿದೆಯ 43b(h) ಪ್ರಕಾರ ಅನುಮತಿಸದ ವಿನಾಯಿತಿಗಳನ್ನು ಪಡೆಯಲು MSME ಗಳಿಗೆ ಪಾವತಿಸದ ಎಲ್ಲಾ ಬಿಲ್‌ಗಳ ವಿವರಗಳನ್ನು ಪಡೆಯಿರಿ.

e-Commerce Summary ವರದಿಯ ಮೂಲಕ ಆನ್‌ಲೈನ್ ಮಾರಾಟದ ವಿವರಗಳು

Amazon, Myntra ಮತ್ತು Flipkart ನಂತಹ e-Commerce operator ಗಳ ಮೂಲಕ ಆನ್‌ಲೈನ್ ಮಾರಾಟ ಮಾಡುವ ವ್ಯವಹಾರಗಳಿಗೆ, ಆನ್‌ಲೈನ್ ಮಾರಾಟದ ವರದಿಗೆ ಸಂಬಂಧಿಸಿದಂತೆ GSTR -1 ನಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಈ ಬದಲಾವಣೆಗಳನ್ನು ಬೆಂಬಲಿಸಲು, TallyPrime Release 4.1 e-Commerce Summary ದೊಂದಿಗೆ ಬಂದಿದೆ. ಇದು ಈ ಕೆಳಗಿನವುಗಳನ್ನು ಹೈಲೈಟ್ ಮಾಡುತ್ತದೆ:

  • IGST, CGST, SGST ಮತ್ತು Cess ನಂತಹ ತೆರಿಗೆ ವಿಧಿಸಬಹುದಾದ ಮೌಲ್ಯಗಳು, ಮತ್ತು ತೆರಿಗೆ ಮೊತ್ತಗಳ ವಿಭಜನೆ
  • e-Commerce operatersಗಳಿಗೆ GSTIN-ವಾರು ಮಾರಾಟ

ಹೀಗಾಗಿ, GST ಪೋರ್ಟಲ್‌ನಲ್ಲಿ ಸಂಬಂಧಿತ ವಿವರಗಳನ್ನು ಸುಲಭವಾಗಿ ನಮೂದಿಸಲು ಈ ವರದಿಯು ನಿಮಗೆ ಸಹಾಯ ಮಾಡುತ್ತದೆ.

TallyHelpwhatsAppbanner
Is this information useful?
YesNo
Helpful?
/* */