Explore Categories

 

 PDF

TallyPrime ಮತ್ತು TallyPrime Edit Log Release 4.0 ಸಂಬಂದಿಸಿದ ರಿಲೀಜ್ ನೋಟ್ಸ್ | ಹೊಸ ವಿಷಯಗಳನ್ನು ಕಲಿಯಿರಿ!

TallyPrime ಮತ್ತು TallyPrime Edit Log Release 4.0 ಈ ಕೆಳಗಿನವುಗಳೊಂದಿಗೆ ನಿಮಗೆ ಹೆಚ್ಚಿನ ಸಂತೋಷ ಮತ್ತು ಉತ್ಸಾಹವನ್ನು ತರುತ್ತದೆ:

  • ವೋಚರ್‌ಗಳು ಮತ್ತು reportsಗಳಂತಹ ವ್ಯವಹಾರ ದಾಖಲೆಗಳನ್ನು WhatsApp ಮೂಲಕ ತ್ವರಿತವಾಗಿ ಇತರರಿಗೆ ಕಳುಹಿಸಬಹುದು.

  • MS Excel ಸ್ವರೂಪದಲ್ಲಿ ಸಿದ್ಧಪಡಿಸಲಾದ ಮಾಸ್ಟರ್ಸ್ ಮತ್ತು ಟ್ರಾನ್ಸಾಕ್ಷನ್ಸ್ ಗಳನ್ನು import ಮಾಡಿಕೊಳ್ಳಲು ಸುಲಭವಾದ ಮಾರ್ಗವಿದೆ.

  • ನಿಮ್ಮ ವ್ಯಾಪಾರದ ಆರೋಗ್ಯವನ್ನು ತ್ವರಿತವಾಗಿ ತೋರಿಸಲು ಅತ್ಯಾಧುನಿಕ Dashboard ತುಂಬಾ ಉಪಯುಕ್ತವಾಗಿದೆ.

ಇದರ ಹೊರತಾಗಿ, GST ಮತ್ತು payment request ಮಾಡ್ಯೂಲ್‌ಗಳಲ್ಲಿನ ಮಾರ್ಪಾಡುಗಳು ಮತ್ತು previous ಮತ್ತು current balanceಗಳನ್ನು ಇನ್‌ವಾಯ್ಸ್‌ನಲ್ಲಿ ಮುದ್ರಿಸುವ ಸೌಲಭ್ಯ ಮತ್ತು ಇನ್ನೂ ಹೆಚ್ಚಿನ ಸುಧಾರಣೆಗಳು ನಿಮ್ಮ TallyPrime ಅನುಭವವನ್ನು ಹೆಚ್ಚು ಉಪಯುಕ್ತವಾಗಿಸುತ್ತದೆ.

ಪ್ರಮುಖ ವೈಶಿಷ್ಟ್ಯಗಳು – TallyPrime ಮತ್ತು TallyPrime Edit Log Release 4.0

ನಿಮ್ಮ ಅನುಭವವನ್ನು ಇನ್ನಷ್ಟು ಆನಂದಕರ ಮಾಡಲು TallyPrime Release 4.0 ಹೊಸ ಮತ್ತು ಉತ್ತೇಜಕ ವೈಶಿಷ್ಟ್ಯಗಳನ್ನು ತರುತ್ತದೆ.

  • WhatsApp for Business ನೊಂದಿಗೆ TallyPrime

  • MS Excel ನಿಂದ dataವನ್ನು import ಮಾಡಿ
  • ಗ್ರಾಫಿಕಲ್ Dashboard

ವ್ಯಾಪಾರ ವಿವರಗಳ ತ್ವರಿತ ವಿತರಣೆ | WhatsApp for Business ನೊಂದಿಗೆ TallyPrime

ವ್ಯಾಪಾರಗಳು ಮತ್ತು ಅವರ ಮಧ್ಯಸ್ಥಗಾರರ ನಡುವಿನ ಪರಿಣಾಮಕಾರಿ ಸಂವಹನದ ಪ್ರಾಮುಖ್ಯತೆಯನ್ನು ಪರಿಗಣಿಸಿ, TallyPrime Release 4.0 ನಿಮಗೆ WhatsApp for business ಮೂಲಕ ತ್ವರಿತ ಸಂವಹನದ ಶಕ್ತಿಯನ್ನು ತರುತ್ತದೆ. ಮಾರುಕಟ್ಟೆಯನ್ನು ಆಳುವ ಸಂವಹನದಲ್ಲಿ ತಾಂತ್ರಿಕ ಪ್ರಗತಿಗಳು ಮತ್ತು ಅನುಭವದ ಸುಧಾರಣೆಗಳ ಲಾಭವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ವ್ಯಾಪಾರಗಳು TallyPrime ನಿಂದ ನೇರವಾಗಿ ಡಾಕ್ಯುಮೆಂಟ್‌ಗಳನ್ನು ಒಂದು ಅಥವಾ ಹೆಚ್ಚಿನ ಪಾರ್ಟಿಗಳಿಗೆ ಅಥವಾ ಪಾಲುದಾರರಿಗೆ ಒಂದೇ ಕ್ಲಿಕ್‌ನಲ್ಲಿ ಕಳುಹಿಸಬಹುದು. ನೀವು ತ್ರೈಮಾಸಿಕದಲ್ಲಿ ನಿಮ್ಮ ಪುಸ್ತಕಗಳನ್ನು ಮುಚ್ಚಿದ್ದೀರಿ ಎಂದು ಪರಿಗಣಿಸಿ. WhatsApp ನಲ್ಲಿ ನಿಮ್ಮ ಹೂಡಿಕೆದಾರರು ಮತ್ತು ಪ್ರಮುಖ ಪಾಲುದಾರರಿಗೆ ಡಿಜಿಟಲ್ ಸಹಿ ಮಾಡಿದ ಹಣಕಾಸು ವರದಿಗಳನ್ನು ನೀವು ಕಳುಹಿಸಬಹುದು. ಅಂತೆಯೇ, ನೀವು WhatsApp ಮೂಲಕ ನಿಮ್ಮ ಪಾರ್ಟಿಗಳಿಗೆ ಇನ್ವಾಯ್ಸ್ ಮತ್ತು ರಿಮೈಂಡರ್ ಪತ್ರಗಳನ್ನು ಕಳುಹಿಸಬಹುದು ಮತ್ತು WhatsApp ಮೂಲಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಬಹುದು. ಸಂವಹನಗಳನ್ನು ತ್ವರಿತವಾಗಿ ಮಾಡುವ ಮೂಲಕ ನಗದು ಹರಿವಿನ ಉತ್ತಮ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ.

ನಿಮ್ಮ ವ್ಯಾಪಾರವು ಭಾರತದಲ್ಲಿ ನೆಲೆಗೊಂಡಿದ್ದರೆ, ನಿಮ್ಮ ದೇಶೀಯ ಪಾರ್ಟಿಗಳು ತ್ವರಿತ ಪಾವತಿಗಳನ್ನು ಮಾಡಲು WhatsApp ಮೂಲಕ ಕಳುಹಿಸಲಾದ ಇನ್‌ವಾಯ್ಸ್‌ಗಳು ಮತ್ತು ರಿಮೈಂಡರ್ ಪತ್ರಗಳಲ್ಲಿನ ಪಾವತಿ URL ಗಳನ್ನು ಕ್ಲಿಕ್ ಮಾಡುವ ಅನುಕೂಲವನ್ನು ಸಹ ಪಡೆಯುತ್ತೀರಾ.

WhatsApp ಈಗ TallyPrime ನೊಂದಿಗೆ ಸಲೀಸಾಗಿ ಸಂಯೋಜಿಸಲ್ಪಟ್ಟಿದೆ. ನೀವು TallyPrime ನಿಂದ WhatsApp for business ನೊಂದಿಗೆ ಸೈನ್ ಅಪ್ ಮಾಡಬಹುದು ಮತ್ತು ಒಮ್ಮೆಗೆ ಒಂದು ಅಥವಾ ಹಲವಾರು ಪಾರ್ಟಿಗಳಿಗೆ ಅಥವಾ ಮಧ್ಯಸ್ಥಗಾರರಿಗೆ ದಾಖಲೆಗಳನ್ನು ಕಳುಹಿಸಬಹುದು. TallyPrime ಇ-ಮೇಲ್ ಮೂಲಕ ದಾಖಲೆಗಳನ್ನು ಕಳುಹಿಸುವ ಸೌಲಭ್ಯವನ್ನು ಹೊಂದಿದ್ದರೂ, ರಿಸೀವರ್ ಯಾವಾಗ ಯಾವ ಮೇಲ್ ಅನ್ನು ನೋಡುತ್ತಾನೆ ಮತ್ತು ಅದರ ಮೇಲೆ ಕಾರ್ಯನಿರ್ವಹಿಸುತ್ತಾನೆ ಎಂದು ನೀವು ಚಿಂತಿಸಬೇಕಾಗಿಲ್ಲ.

TallyPrime ಗೆ ಯಾವುದೇ ಸಾಫ್ಟ್‌ವೇರ್‌ನಿಂದಾದರೂ ಸರಳ ಮೈಗ್ರಷನ್ | MS Excel ನಿಂದ ಡೇಟಾವನ್ನು ಇಂಪೋರ್ಟ್ ಮಾಡಿಕೊಳ್ಳಿ

ಹೆಚ್ಚಿನ ಪ್ರಮಾಣದ ಡೇಟಾವನ್ನು ಹಸ್ತಚಾಲಿತವಾಗಿ ನಮೂದಿಸುವುದು ವ್ಯವಹಾರಕ್ಕೆ ಕೆಟ್ಟ ಅನುಭವವಾಗಿದೆ. ನಮೂದುಗಳನ್ನು ಹಸ್ತಚಾಲಿತವಾಗಿ ಮಾಡುವುದು ಸಮಯ ತೆಗೆದುಕೊಳ್ಳುತ್ತದೆ ಮತ್ತು ತಪ್ಪುಗಳಿಗೆ ಕಾರಣವಾಗಬಹುದು. ಇದನ್ನು ಪರಿಹರಿಸಲು, MS Excel ನಿಂದ ಡೇಟಾವನ್ನು ಸಲೀಸಾಗಿ ಇಂಪೋರ್ಟ್ ಮಾಡಿಕೊಳ್ಳುವ ಸೌಲಭ್ಯವನ್ನು TallyPrime Release 4.0 ನಿಮಗೆ ಒದಗಿಸುತ್ತದೆ. XML ಫೈಲ್‌ಗಳನ್ನು ಇಂಪೋರ್ಟ್ ಮಾಡಿಕೊಳ್ಳಲು ಅಸ್ತಿತ್ವದಲ್ಲಿರುವ ಆಯ್ಕೆಗೆ ಇದು ಹೆಚ್ಚುವರಿಯಾಗಿದೆ.

ನಿಮ್ಮ ಅನುಭವದಲ್ಲಿ ನೀವು ನೋಡಿರುವಂತೆ, ಹಲವು ಸಾಫ್ಟ್‌ವೇರ್ ಉತ್ಪನ್ನಗಳು ನಿಮಗೆ Excelಗೆ ಡೇಟಾವನ್ನು ಎಕ್ಸ್ಪೋರ್ಟ್ ಮಾಡಲು ಅವಕಾಶ ಮಾಡಿಕೊಡುತ್ತವೆ. ಇದು Excel workbooksಗಳಲ್ಲಿ ಡೇಟಾವನ್ನು ಪಡೆಯಲು ಮತ್ತು ಅದನ್ನು TallyPrime ಗೆ ಇಂಪೋರ್ಟ್ ಮಾಡಿಕೊಳ್ಳಲು ನಿಮಗೆ ಅನುಮತಿಸುತ್ತದೆ.

ನಿಮಗಾಗಿ ಏನಿದೆ ಎಂಬುದನ್ನು ಕಂಡುಕೊಳ್ಳಿ:

  1. ಎಕ್ಸೆಲ್‌ನಿಂದ ಮಾಸ್ಟರ್‌ಗಳು ಮತ್ತು ಟ್ರಾನ್ಸಾಕ್ಷನ್ಸ್ಗಳನ್ನು ಸುಲಭವಾಗಿ ಇಂಪೋರ್ಟ್ ಮಾಡಿಕೊಳ್ಳಿ.
  2. ಡೀಫಾಲ್ಟ್ ಟೆಂಪ್ಲೇಟ್‌ಗಳು/sample excel fileಗಳನ್ನು ಬಳಸಿ.

  3. ಫಾರ್ಮ್ಯಾಟ್ ಅಥವಾ ಆರ್ಡರ್ ಅನ್ನು ಲೆಕ್ಕಿಸದೆಯೇ ಯಾವುದೇ Excel workbookನಲ್ಲಿ ಕ್ಯುರೇಟೆಡ್ ಡೇಟಾವನ್ನು ತೆಗೆದುಕೊಳ್ಳಿ ಮತ್ತು ಅದನ್ನು TallyPrime ನಲ್ಲಿನ ಫೀಲ್ಡ್‌ಗಳಿಗೆ ಮ್ಯಾಪ್ ಮಾಡಿ.
  4. ಇಂಪೋರ್ಟ್ ಮಾಡುವಾಗ ರಚಿಸಲಾದ ಲಾಗ್‌ಗಳಿಂದ ಇಂಪೋರ್ಟ್ ಮಾಡುವಾಗ ಸಂಭವಿಸಿದ ದೋಷಗಳನ್ನು ಗುರುತಿಸಿ

ಹಣಕಾಸಿನ ಒಳನೋಟಗಳನ್ನು ಸೃಷ್ಟಿಸಲು ಒಂದು ವಿಸುವಲ್ ಟೂಲ್ | ಗ್ರಾಫಿಕಲ್ Dashboard

TallyPrime ನಲ್ಲಿ ನೀವು ಅರ್ಥಗರ್ಭಿತ ಸ್ವರೂಪಗಳನ್ನು ಬಳಸಿಕೊಂಡು ವ್ಯಾಪಾರ ಮಾಹಿತಿಯನ್ನು ವಿಶ್ಲೇಷಿಸಲು Dashboardಗಳನ್ನು ಬಳಸಬಹುದು. ಡಿಫಾಲ್ಟಾಗಿ ಒದಗಿಸಲಾದ Sales ಮತ್ತು purchase dashboardಗಳ ಹೊರತಾಗಿ, ನೀವು ವಿಭಿನ್ನ dashboardಗಳನ್ನು ರಚಿಸಬಹುದು. ನಿಮ್ಮ ಅಗತ್ಯಗಳ ಆಧಾರದ ಮೇಲೆ, ನೀವು ವಿಭಿನ್ನ ವರದಿಗಳನ್ನು ವಿಭಿನ್ನ Tilesಗಳಾಗಿ ಗುಂಪು ಮಾಡಬಹುದು, ವಿಭಿನ್ನ ಅಗತ್ಯಗಳನ್ನು ಪೂರೈಸಲು ಪ್ರತಿ tile ಅನ್ನು ಕಾನ್ಫಿಗರ್ ಮಾಡಬಹುದು ಮತ್ತು ಪ್ರತಿ tileನೊಂದಿಗೆ ಸಂವಹನ ಮಾಡಬಹುದು.

TallyPrime ನಲ್ಲಿನ Dashboard ಕೆಳಗಿನವುಗಳಿಗೆ ಅನುಕೂಲವನ್ನು ಒದಗಿಸುತ್ತದೆ:

  1. Tiles ಸೇರಿಸಿ ಅಥವಾ tiles ಮರೆಮಾಡಿ, ಪ್ರತಿ ಟೈಲ್ ಅನ್ನು ಸ್ವತಂತ್ರವಾಗಿ ಕಾನ್ಫಿಗರ್ ಮಾಡಿ, ಡೇಟಾ ಪಾಯಿಂಟ್‌ಗಳನ್ನು ಸೇರಿಸಿ ಅಥವಾ ಹೊರಗಿಡಿ, ಇತ್ಯಾದಿ.

  2. ಬಳಕೆದಾರರ ಹಕ್ಕುಗಳ ಆಧಾರದ ಮೇಲೆ Dashboardಗಳಿಗೆ ಪ್ರವೇಶವನ್ನು ನಿರ್ಬಂಧಿಸಿ. ಕೆಲವು ಬಳಕೆದಾರರಿಗೆ ಕೆಲವು tileಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದರೆ, ಅಂತಹ tileಗಳು ಆ ಬಳಕೆದಾರರಿಗೆ Dashboardನ ಭಾಗವಾಗಿರುವುದಿಲ್ಲ.
  3. ವಿಭಿನ್ನ ಉದ್ದೇಶಗಳಿಗಾಗಿ ವಿಭಿನ್ನ Dashboardಗಳನ್ನು ರಚಿಸಿ, ನಿಮ್ಮ ಆದ್ಯತೆಗಳ ಪ್ರಕಾರ tiels ಅನ್ನು ಸಂಘಟಿಸಿ ಮತ್ತು ವಿಯೂಸ್ಗಳನ್ನು ಸೇವಮಾಡಿ.
  4. ನೀವು ಕಂಪನಿಯನ್ನು ತೆರೆದಾಗ dashboard ಅನ್ನುಹೋಮ್‌ಸ್ಕ್ರೀನಾಗಿ ಲೋಡ್ ಮಾಡಿ.
  5. ನೀವು ಪ್ರಿಂಟ್ ಅಥವಾ ಎಕ್ಸ್‌ಪೋರ್ಟ್ ಮಾಡಬಹುದು ಮತ್ತು ಇಮೇಲ್ ಅಥವಾ WhatsApp ಮೂಲಕ ಷೇರುದಾರರಿಗೆ ಕಳುಹಿಸಬಹುದು.

ಪ್ರೋಡಕ್ಟ್‌ನಲ್ಲಿ ಸುಧಾರಣೆಗಳು – TallyPrime ಮತ್ತು TallyPrime Edit Log Release 4.0

ಇನ್‌ವಾಯಿಸ್‌ನಲ್ಲಿ previous ಮತ್ತು current balances ಪ್ರಿಂಟ್ ಮಾಡುವುದು

ಇನ್‌ವಾಯ್ಸ್ ಪ್ರಿಂಟ್ ಮಾಡುವುದು ಈಗ ಹೆಚ್ಚಿನ ಫಲಿತಾಂಶ-ಆಧಾರಿತವಾಗಿದೆ, ಏಕೆಂದರೆ ನೀವು ಇನ್‌ವಾಯಿಸ್‌ನು ಪ್ರಿಂಟ್ ಮಾಡುವ ಸಮಯದಲ್ಲಿ ಅನ್ವಯಿಸುವ ರೀತಿಯಲ್ಲಿ previous ಮತ್ತು current balanceಗಳನ್ನು ಪಾರ್ಟಿ ಗೆ ತಕಂತೆ ಪ್ರಿಂಟ್ ಮಾಡಬಹುದು.

QRMP ಡೀಲರ್‌ಗಳಿಗಾಗಿ ಒಂದೇ JSON ಫೈಲ್‌ನಲ್ಲಿ ತ್ರೈಮಾಸಿಕಕ್ಕೆ GSTR-3B ಎಕ್ಸ್‌ಪೋರ್ಟ್ ಹೊಂದಿಸಲಾಗುತ್ತಿದೆ

QRMP ಡೀಲರ್‌ಗಳು ಈಗ GSTR-3B ಯನ್ನು ಒಂದೇ JSON ಫೈಲ್‌ನಲ್ಲಿ ತ್ರೈಮಾಸಿಕವರೆಗೆ ಎಕ್ಸ್‌ಪೋರ್ಟ್ ಮಾಡಬಹುದು ಮತ್ತು GSTR-3Bಯನ್ನು ಫೈಲ್ ಮಾಡಲು GST ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು.

GSTR-3B ಯ Input Tax Credit Available ವಿಭಾಗದಲ್ಲಿ ಪಾರ್ಟಿಯ GSTIN/UIN

ನೀವು Input Tax Credit Available ವಿಭಾಗಕ್ಕೆ ಹೋದಾಗ ಮತ್ತು ಪಾರ್ಟಿ-ವೈಸ್ ವೋಚರ್‌ಗಳನ್ನು ವೀಕ್ಷಿಸಿದಾಗ, ನೀವು ಪಾರ್ಟಿಯ GSTIN/UIN ಅನ್ನು ಸಹ ನೋಡಬಹುದು.

TallyPrime ನಿಂದ TallyEdge ಅನ್ನು ಅನ್ವೇಷಿಸಿ

TallyEdge ನಿಮ್ಮ ಗೋ-ಟೂ ಅಕೌಂಟ್ ಅಗ್ರಿಗೇಟರ್  ಅನ್ನು ಎಕ್ಸ್‌ಪ್ಲೋರಿಂಗ್ ಮಾಡುವುದು – ಈಗ ಇನ್ನಷ್ಟು ಸುಲಭವಾಗಿದೆ, ಏಕೆಂದರೆ ನೀವು TallyPrime ನಲ್ಲಿ ಎಕ್ಸ್‌ಚೇಂಜ್ ಮೆನು ಮೂಲಕ ಅದನ್ನು ಎಕ್ಸ್‌ಪ್ಲೋರ್ ಮಾಡಬಹುದು.

TallyPrime ನಿಂದ TallyPrime Powered by AWS ಅನ್ನು ಅನ್ವೇಷಿಸಿ

TallyPrime Powered by AWS ಅನ್ನು ಎಕ್ಸ್‌ಪ್ಲೋರ್ ಮಾಡುವುದು ಈಗ ಇನ್ನಷ್ಟು ಸುಲಭವಾಗಿದೆ, ಏಕೆಂದರೆ ನೀವು TallyPrime ನ Help ಮೆನುವಿನಿಂದ ಅದರ ಬಗ್ಗೆ ಕಲಿಯಬಹುದು.

ಹೊಸ FVU ಟೂಲ್ 8.2 ಪ್ರಕಾರ TDS ಮತ್ತು TCS ರಿಟರ್ನ್‌ಗಳನ್ನು ಎಕ್ಸ್‌ಪೋರ್ಟ್ ಮಾಡುವ ಅವಕಾಶ

ನೀವು ಈಗ ಹೊಸ FVU ಟೂಲ್ 8.2 ರ ಪ್ರಕಾರ ಕೆಳಗಿನ ರಿಟರ್ನ್ ರಿಪೋರ್ಟ್ ಗಳನ್ನು ಎಕ್ಸ್‌ಪೋರ್ಟ್ ಮಾಡಬಹುದು:

  • Salary TDS Form 24Q
  • TDS Form 26Q
  • TDS Form 27Q
  • TCS Form 27EQ

GSTR-1 Document Summary ಯಲ್ಲಿ ಕ್ಯಾನ್ಸಲ್ಲ್ಡ್ ವೌಚೇರ್ಸ್ ಲೆಕ್ಕಾಚಾರ

ನೀವು ಒಂದು ಅಥವಾ ಹೆಚ್ಚಿನ ಸೇಲ್ಸ್ ಇನ್‌ವಾಯ್ಸ್‌ಗಳನ್ನು ಕ್ಯಾನ್ಸಲ್ಮಾಡಿ ದಾಗ, ಎಲ್ಲಾ ತಿಂಗಳುಗಳ ಕ್ಯಾನ್ಸಲ್ಲ್ಡ್ ವೋಚರ್‌ಗಳ ಎಣಿಕೆಯನ್ನು GSTR-1 Document Summary ಯಲ್ಲಿ ಸೇರಿಸಲಾಗುತ್ತದೆ.

RCM ಮತ್ತು ಅಂರೆಜಿಸ್ಟರ್ಡ್ ಡೀಲರ್ (URD) ​​ಜೊತೆಗಿನ ಟ್ರಾನ್ಸಾಕ್ಷನ್ಸ್ ಗಳಲ್ಲಿ GST ಲೆಡ್ಜರ್‌ಗಳು

ಆರ್‌ಸಿಎಂ ಖರೀದಿ ವೋಚರ್‌ಗಳು ಮತ್ತು ಯುಆರ್‌ಡಿಗಳಿಂದ ಖರೀದಿಗಳಿಗಾಗಿ ರಚಿಸಲಾದ ವೋಚರ್‌ಗಳಲ್ಲಿ  ಜಿಎಸ್‌ಟಿ ಲೆಡ್ಜರ್‌ಗಳನ್ನು ನೀವು ಈಗ ಸೇರಿಸಬಹುದು ಮತ್ತು ಈ ವೋಚರ್‌ಗಳನ್ನು ರಿಟರ್ನ್‌ನಲ್ಲಿ ಸೇರಿಸಲಾಗುವುದು ಎಂದು ಖಚಿತವಾಗಿರಿ.

GST Rate ಬದಲಾವಣೆಯ ನಂತರ GST ಮೊತ್ತದ ನವೀಕರಣ

ನೀವು GST Rateಅನ್ನು ಓವೆರ್ರೈಡ್ ಮಾಡಿದಾಗ, ವೋಚರ್‌ಗಳಲ್ಲಿನ GST ಮೊತ್ತವು ಖಂಡಿತವಾಗಿಯೂ ನವೀಕರಿಸಲ್ಪಡುತ್ತದೆ. Use common ledger for item allocation configuration ಆಯ್ಕೆಯನ್ನು No ಎಂದು ಹೊಂದಿಸಿದ್ದರೂ ಸಹ, ನೀವು ಈಗ ಮನಬಂದಂತೆ GST Rateಅನ್ನು ಓವೆರ್ರೈಡ್ ಮಾಡಲು ಸಾಧ್ಯವಾಗುತ್ತದೆ ಮತ್ತು GST ಮೊತ್ತವನ್ನು ನವೀಕರಿಸಲಾಗುತ್ತದೆ.

Job Work Out Orders ಗಳಲ್ಲಿ ಕಂಪನಿ GSTIN/UIN ಮುದ್ರಣ ಸೌಲಭ್ಯ

Job Work Out Order ಗಳಲ್ಲಿ ಈಗ GSTIN/UIN ಅನ್ನು ಮುದ್ರಿಸಲಾಗುತ್ತದೆ

  1. ಬಹು GST ರಿಜಿಸ್ಟ್ರೇಷನ್ ಗಳ ಸಂದರ್ಭದಲ್ಲಿ, GST ರಿಜಿಸ್ಟ್ರೇಷನ್ (ವೋಚರ್ ರಚನೆಯ ಸಮಯದಲ್ಲಿ ಆಯ್ಕೆಮಾಡಲಾದ) ಮತ್ತು State Code ಅನ್ನು ಮುದ್ರಿಸಲಾಗುತ್ತದೆ.
  2. ಒಂದೇ GST ರಿಜಿಸ್ಟ್ರೇಷನ್ ಸಂದರ್ಭದಲ್ಲಿ, ನೀವು GSTIN/UIN ಮತ್ತು State Code ವಿವರಗಳನ್ನು ‘More Details’ ಬಳಸಿ ನಮೂದಿಸಬಹುದು ಮತ್ತು ಅವುಗಳನ್ನು ಮುದ್ರಿಸಬಹುದು.

GSTR-1 HSN Summary ಯನ್ನು ಎಕ್ಸ್ಪೋರ್ಟ್ ಮಾಡಲಾದ MS Excel ಮತ್ತು CSV ಫೈಲ್‌ಗಳಲ್ಲಿನ Total Value Field

GSTR-1 HSN Summary ಯನ್ನು MS Excel ಅಥವಾ CSV ಗೆ ಎಕ್ಸ್ಪೋರ್ಟ್ ಮಾಡುವ ಅನುಭವ ಈಗ ಉತ್ತಮವಾಗಿದೆ.

ನೀವು GSTR-1 HSN Summary ಯನ್ನು MS Excel ಅಥವಾ CSV ಫೈಲ್ ಆಗಿ ಎಕ್ಸ್ಪೋರ್ಟ್ ಮಾಡಿದಾಗಲೂ Total Value ಕ್ಷೇತ್ರವನ್ನು ಈಗ ಒಟ್ಟು GST ಯೊಂದಿಗೆ ಪ್ರದರ್ಶಿಸಲಾಗುತ್ತದೆ.

GSTR-3B Nature Viewನಲ್ಲಿ ಕೆಲವು ಟ್ರಾನ್ಸಾಕ್ಷನ್ಸ್ಗಗಳಿಗೆ Taxable ಮತ್ತು Tax ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ

ಈ ಹಿಂದೆ, ಟ್ರಾನ್ಸಾಕ್ಷನ್ಸ್ ಅನ್ನು ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸೇರಿಸಿದಾಗ, Taxable ಮತ್ತು Tax ಮೊತ್ತವನ್ನು ದ್ವಿಗುಣಗೊಳಿಸಲಾಗುತಿತ್ತು.

GSTR-3B ಅನ್ನು Nature Viewನಲ್ಲಿ ವೀಕ್ಷಿಸುವುದು ಇದೀಗ ಇನ್ನಷ್ಟು ಉತ್ತಮವಾಗಿದೆ ಏಕೆಂದರೆ ನೀವು ಸರಿಯಾದ Taxable ಮತ್ತು Tax ಮೊತ್ತವನ್ನು ವೀಕ್ಷಿಸಬಹುದು.

GSTR-3B ನಲ್ಲಿ ಸೇವೆಗಳ ಇಂಪೋರ್ಟ್ಗಾಗಿ ದಾಖಲಿಸಲಾದ ವೋಚರ್‌ಗಳು

Exempt from taxes ಸೇವೆಗಳ ಇಂಪೋರ್ಟ್ಗಾಗಿ ದಾಖಲಾದ ವೋಚರ್‌ಗಳು ಈಗ 4A Input Tax Credit Available ವಿಭಾಗದಲ್ಲಿ ಮಾತ್ರ ಸೇರಿಸಲಾಗಿವೆ ಮತ್ತು 3.1d Inward Supplies (applicable for Reverse Charge) ವಿಭಾಗದಲ್ಲಿ ಸೇರಿಸಲಾಗಿಲ್ಲ.

ಮತ್ತೊಂದು ಸಾಫ್ಟ್‌ವೇರ್‌ನಿಂದ ಡೇಟಾವನ್ನು ಇಂಪೋರ್ಟ್ ಮಾಡಿಕೊಂಡಾಗ GSTR-1 ತಡೆರಹಿತ ಎಕ್ಸ್ಪೋರ್ಟ್ ಸೌಲಭ್ಯ

ಮತ್ತೊಂದು ಸಾಫ್ಟ್‌ವೇರ್‌ನಿಂದ ಡೇಟಾವನ್ನು ಇಂಪೋರ್ಟ್ ಮಾಡಿಕೊಂಡರೂ ಸಹ TallyPrime ನಿಂದ GSTR-1 ರ ಎಕ್ಸ್ಪೋರ್ಟ್ ಈಗ ಸುಗಮವಾಗಿದೆ.

ಒಂದೇ Bill of Entry No. ನೊಂದಿಗೆ ಪರ್ಚೆಸ್ ವೌಚರ್ಗಳು

ನೀವು ಈಗ ಒಂದೇ Bill of Entry No. ನೊಂದಿಗೆ ಒಂದಕ್ಕಿಂತ ಹೆಚ್ಚು ಪರ್ಚೆಸ್ ವೌಚರ್ಗಳನ್ನು ರೆಕಾರ್ಡ್ ಮಾಡಬಹುದು ಮತ್ತು ವೌಚರ್ಗಳನ್ನು ರಿಟರ್ನ್‌ಗಳಲ್ಲಿ ಸೇರಿಸಲಾಗುವುದು.

UoM ಅನ್ವಯಿಸದಿದ್ದಾಗ GST ಪೋರ್ಟಲ್‌ನಲ್ಲಿ ವೋಚರ್ ಅನ್ನು ಅಪ್‌ಲೋಡ್ ಮಾಡಿ

ನೀವು ಈಗ ಕೆಳಗಿನ ಸೌಲಭ್ಯಗಳೊಂದಿಗೆ ಯೂನಿಟ್ ಆಫ್ ಮೆಸೆರ್ಮೆಂಟ್ ಅನ್ವಯಿಸದಿರುವಲ್ಲಿ ಸ್ಟಾಕ್ ಐಟಂಗಳೊಂದಿಗೆ ವೋಚರ್‌ಗಳನ್ನು ಅಪ್‌ಲೋಡ್ ಮಾಡಬಹುದು:

  • ಸರಕುಗಳಿಗಾಗಿ ರಚಿಸಲಾದ ವೋಚರ್ UoM ಅನ್ನು OTH ಆಗಿ ಪ್ರದರ್ಶಿಸುತ್ತದೆ.

  • ಸೇವೆಗಳಿಗಾಗಿ ರಚಿಸಲಾದ ವೋಚರ್ UoM ಅನ್ನು NA ಎಂದು ತೋರಿಸುತ್ತದೆ.

GST ಡೇಟಾದೊಂದಿಗೆ ವೋಚರ್‌ಗಳನ್ನು ಮನಬಂದಂತೆ ರಚಿಸಿ

ಈಗ GST ಸಂಬಂಧಿತ ಮಾಹಿತಿಯೊಂದಿಗೆ ವೋಚರ್ ಅನ್ನು ರಚಿಸುವುದು ತುಂಬಾ ಸುಲಭ, ಏಕೆಂದರೆ ನೀವು ವೋಚರನ್ನು ರಚಿಸುವಾಗ ಯಾವುದೇ ಸವಾಲುಗಳು ಅಥವಾ ತಪ್ಪುಗಳನ್ನು ಎದುರಿಸುವುದಿಲ್ಲ.

ODBC ಮೂಲಕ ಎಕ್ಸ್ಪೋರ್ಟ್ ಮಾಡಲಾದ Excel ನಲ್ಲಿ HSN/SAC, ವಿವರಣೆ, ಮತ್ತು ಪಾರ್ಟಿ GSTIN

ODBC ಮೂಲಕ ಎಕ್ಸ್ಪೋರ್ಟ್ ಮಾಡಿದಾಗ HSN/SAC, ವಿವರಣೆ, ಮತ್ತು ಪಾರ್ಟಿ GSTIN ಅನ್ನು MS Excel ಫೈಲ್‌ನಲ್ಲಿ ಸೇರಿಸಲಾಗುತ್ತಿರಲಿಲ್ಲ.

ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.

HSN/SAC ಉದ್ದದೊಂದಿಗೆ ಸಂಬಂಧವಿಲ್ಲದೆ TallyPrime ನ ಸುಗಮ ಕಾರ್ಯಾಚರಣೆ

TallyPrime ಈಗ ನೀವು GSTR-1 ಮತ್ತು GSTR-3B ಅನ್ನು ತೆರೆದಾಗ, ಟ್ರಾನ್ಸಾಕ್ಷನ್ಸ್ ಗಳಲ್ಲಿ HSN/SAC ನ ಉದ್ದವು 1024 ಅಕ್ಷರಗಳನ್ನು ಮೀರಿದಾಗಲೂ ಸರಾಗವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.

TallyPrime Release 4.0 ಗೆ ತಡೆರಹಿತವಾದ ಮೈಗ್ರೇಶನ್

ನೀವು ಈಗ ನಿಮ್ಮ ಕಂಪನಿಯ ಡೇಟಾ ಕೆಳಗಿನ ಕಾರಣಗಳಿಂದ ಸಂಭವಿಸುವ ಮೆಮೊರಿ-ಸಂಬಂಧಿತ ದೋಷಗಳು ಇಲ್ಲದೆ TallyPrime ಗೆ ತಡೆರಹಿತವಾಗಿ ಮೈಗ್ರೇಶನ್  ಮಾಡಬಹುದು:

  • ಕಂಪನಿ ಡೇಟಾ ಗಾತ್ರ ಅಥವಾ ವೋಚರ್‌ಗಳ ಸಂಖ್ಯೆ ದೊಡ್ಡದಾಗಿದೆ.
  • Include Expense for slab calculation ಕಾನ್ಫಿಗರೇಶನ್ ಎನೆಬಲ್ ಮಾಡಿದಾಗ, ವೋಚರ್‌ಗಳು ಸ್ಲಾಬ್ ಆಧಾರಿತ ರೇಟ್‌ಗಳೊಂದಿಗೆ ಸ್ಟಾಕ್ ಐಟಮ್‌ಗಳು ಅಥವಾ ಸೇವೆಗಳನ್ನು ಹೊಂದಿರುತ್ತವೆ.

ಆದಾಗ್ಯೂ, ನೀವು TallyPrime Release 3.0 ಅಥವಾ 3.0.1 ನಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ಮೈಗ್ರಷನ್ ಪ್ರಕ್ರಿಯೆಯನ್ನು ನಿರ್ವಹಿಸುವ ಅಗತ್ಯವಿಲ್ಲ. ನೀವು ನಿಮ್ಮ ಕಂಪನಿ ಡೇಟಾವನ್ನು TallyPrime Release 4.0 ನಲ್ಲಿ ಲೋಡ್ ಮಾಡಬಹುದು ಮತ್ತು ನಿಮ್ಮ ಕೆಲಸವನ್ನು ಮುಂದುವರಿಸಬಹುದು.

UPI ಮೂಲಕ ಪಾವತಿ ವಿನಂತಿಗಳಿಗಾಗಿ ಭಾಗಶಃ ಪಾವತಿಗಳು

ನೀವು UPI ಮೂಲಕ ಪೇಮೆಂಟ್ ರಿಕ್ವೆಸ್ಟನ್ನು ಕಳುಹಿಸಿದಾಗ ನಿಮ್ಮ ಖರೀದಿದಾರರು ಈಗ ಮೊತ್ತವನ್ನು ಬದಲಾಯಿಸಬಹುದು ಮತ್ತು ಭಾಗಶಃ ಪಾವತಿಗಳನ್ನು ಮಾಡಬಹುದು.

ನಗದು ಲೆಡ್ಜರ್‌ ಹೊಂದಿರುವ ಟ್ರಾನ್ಸಾಕ್ಷನ್ಸ್ ಗಳಿಂದ పేమెంట్ రిక్వెస్ట్ ಗಾಗಿ QR ಕೋಡ್‌ಗಳು

ನಗದು ಲೆಡ್ಜರ್‌ನೊಂದಿಗೆ ಟ್ರಾನ್ಸಾಕ್ಷನ್ಸ್ ದಾಖಲಾಗಿದ್ದರೂ పేమెంట్ రిక్వెస్ట్ಗಾಗಿ ಈಗ QR ಕೋಡ್ ಅನ್ನು ರಚಿಸಲಾಗುತ್ತದೆ.

GST ಇಲ್ಲದೆ ಸಿಂಪಲ್ ಇನ್ವಾಯ್ಸ್ ಫಾರ್ಮಟ್ನಲ್ಲಿ పేమెంట్ రిక్వెస్ట్ಗಾಗಿ QR ಕೋಡ್‌ನ ಮುದ್ರಣ

ನೀವು ಇದೀಗ F11(ಕಂಪನಿ ಫೀಚರ್ಸ್) ಅಡಿಯಲ್ಲಿ GST ನಿಷ್ಕ್ರಿಯಗೊಳಿಸಿದ್ದರೂ ಸಹ ಸಿಂಪಲ್ ಇನ್ವಾಯ್ಸ್ ಫಾರ್ಮಟ್ನಲ್ಲಿ పేమెంట్ రిక్వెస్ట్ಗಾಗಿ QR ಕೋಡ್ ಅನ್ನು ಮುದ್ರಿಸಲು ಸಾಧ್ಯವಾಗುತ್ತದೆ.

ಈಗ ನೀವು ವೋಚರ್ ಅನ್ನು ರಚಿಸಿದಾಗ, ಮುದ್ರಣ ಮಾಡುವ ಮೊದಲು payment link ಅನ್ನು ರಚಿಸಲು TallyPrime ನಿಮ್ಮನ್ನು ಕೇಳುತ್ತದೆ.

ವೋಚರ್ ಪ್ರಕಾರದ ಮಾಸ್ಟರ್‌ನಲ್ಲಿ Generate payment link/QR Code after saving voucher ಮತ್ತು Print voucher after saving  ಒಪ್ಷುನ್ಸ್ ಅನ್ನು ಸಕ್ರಿಯಗೊಳಿಸಿದಾಗ ಇದು ಸಂಭವಿಸುತ್ತದೆ.

ಪ್ರಿಂಟ್ ಮಾಡುವ ಮೊದಲು payment link ಅನ್ನು ರಚಿಸುವುದರಿಂದ ಪ್ರಿಂಟ್ ನಲ್ಲಿ  పేమెంట్ రిక్వెస్ట్ಗಾಗಿ payment link ಮತ್ತು QR ಕೋಡ್ ಎರಡನ್ನೂ ಒಳಗೊಂಡಿದೆ ಎಂದು ಖಚಿತಪಡಿಸುತ್ತದೆ.

ತಡೆರಹಿತ e-Invoice ಉತ್ಪಾದನೆ

E-Invoice ಅನ್ನು ರಚಿಸುವುದು ಈಗ ಹೆಚ್ಚು ಸುಗಮವಾಗಿದೆ ಏಕೆಂದರೆ ನೀವು ಈಗ ಈ ಕೆಳಗಿನ ಸಂದರ್ಭಗಳಲ್ಲಿ e-Invoice ಅನ್ನು ಯಶಸ್ವಿಯಾಗಿ ರಚಿಸಬಹುದು:

  • ಇನ್ವಾಯ್ಸ್ ಅಲ್ಲಿ ರವಾನೆದಾರರಾಗಿ ಸರ್ಕಾರಿ ಏಜೆನ್ಸಿಯನ್ನು ಹೊಂದಿದೆ.
  • E-Way Billಗೆ ರಾಜ್ಯದೊಳಗಿನ ಟ್ರಾನ್ಸಾಕ್ಷನ್ಸ್ ಅನ್ವಯಿಸುವುದಿಲ್ಲ.

ಇದಲ್ಲದೆ, ನೀವು ಸರಕುಗಳು ಅಥವಾ ಸೇವೆಗಳ ಮಾರಾಟಕ್ಕಾಗಿ e-Invoice ಅನ್ನು ರಚಿಸಿದಾಗ The ValDtls field is required ಎರ್ರರ್ ಅನ್ನು ನೀವು ಎದುರಿಸುವುದಿಲ್ಲ.

ಮಲ್ಟಿ ಇನ್‌ವೈಸ್ ಪ್ರಿಂಟಿಂಗ್‌ಗಾಗಿ ಸೇಲ್ಸ್ ಇನ್‌ವಾಯಿಸ್‌ನಲ್ಲಿ QR ಕೋಡ್

QR ಕೋಡ್‌ನೊಂದಿಗೆ ಮಲ್ಟಿ ಇನ್ವಾಯ್ಸ್  ಪ್ರಿಂಟಿಂಗ್  ಈಗ ತೃಪ್ತಿಕರವಾಗಿದೆ.

ನೀವು ಮಲ್ಟಿಪಲ್ ಸೇಲ್ಸ್ ಇನ್‌ವಾಯ್ಸ್‌ಗಳನ್ನು ಪ್ರಿಂಟ್ ಮಾಡಿದಾಗ, ಎಲ್ಲಾ ಇನ್‌ವಾಯ್ಸ್‌ಗಳು ಈಗ QR ಕೋಡ್ ಅನ್ನು ಒಳಗೊಂಡಿರುತ್ತವೆ.

ಇ-ಇನ್‌ವಾಯ್ಸ್‌ನೊಂದಿಗೆ ಇ-ವೇ ಬಿಲ್‌ನ ಪ್ರಿಂಟ್ ಮಾಡುವುದು

ನೀವು ಇ-ಇನ್‌ವಾಯ್ಸ್‌ನೊಂದಿಗೆ ಇ-ವೇ ಬಿಲ್ ಪ್ರಿಂಟಿಂಗ್  ಅನ್ನು  ಸಕ್ರಿಯಗೊಳಿಸಿದಾಗ (F12 ಅಡಿಯಲ್ಲಿ ಇನ್‌ವಾಯ್ಸ್ ಕಾನ್ಫಿಗರೇಶನ್‌ನಲ್ಲಿ), ಆ ಕಾನ್ಫಿಗರೇಶನ್ ಒಂದು ಇನ್‌ವಾಯ್ಸ್‌ಗೆ ಮಾತ್ರ ಅನ್ವಯಿಸುತ್ತಿತ್ತು.

ಆದರೆ ಈಗ ನೀವು TallyPrime ಅನ್ನು ಮುಚ್ಚಿದರೂ ಅಥವಾ ಬೇರೆ ಕಂಪನಿಯನ್ನು ಲೋಡ್ ಮಾಡಿದರೂ ಸಹ, ಎಲ್ಲಾ ಇನ್‌ವಾಯ್ಸ್‌ಗಳಿಗೆ ಕಾನ್ಫಿಗರೇಶನ್ ಅನ್ನು ಅನ್ವಯಿಸಲಾಗುತ್ತದೆ

ಕ್ಲೈಂಟ್ ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ ಡೆಲಿವರಿ ನೋಟೀಸ್ಗಳಲ್ಲಿ ಆರ್ಡರ್ ಸಂಖ್ಯೆಯನ್ನು ಆಯ್ಕೆ ಮಾಡುವುದು

ಮಲ್ಟಿ-ಯೂಸರ್ ಪರಿಸರವನ್ನು ಹೊಂದಿರುವ ಕ್ಲೈಂಟ್ ಕಂಪ್ಯೂಟರ್‌ನಲ್ಲಿ, ಡೆಲಿವರಿ ನೋಟೀಸ ರಚಿಸುವಾಗ ಆರ್ಡರ್ ಸಂಖ್ಯೆಯನ್ನು ಆಯ್ಕೆ ಮಾಡಲು ತೆಗೆದುಕೊಳ್ಳುವ ಸಮಯವು ನಿರೀಕ್ಷಿಸಿದ ಸಮಯಕ್ಕಿಂತ ಹೆಚ್ಚಾಗಿತ್ತು.

ಈಗ ಸುಧಾರಿತ ಕಾರ್ಯನಿರ್ವಹಣೆಯೊಂದಿಗೆ, ನೀವು ಆರ್ಡರ್ ಸಂಖ್ಯೆಯನ್ನು ತಕ್ಷಣ ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಬ್ರೌಸರ್‌ನಿಂದ ಡೌನ್‌ಲೋಡ್ ಮಾಡಲಾದ ಸೇಲ್ಸ್ ಇನ್‌ವಾಯ್ಸ್‌ಗಳ ಶೀರ್ಷಿಕೆ

ನೀವು ಬ್ರೌಸರ್‌ನಿಂದ ಸೇಲ್ಸ್ ಇನ್‌ವಾಯ್ಸ್ ಅನ್ನು ಡೌನ್‌ಲೋಡ್ ಮಾಡಿದಾಗ, ಇನ್‌ವಾಯ್ಸ್‌ ಶೀರ್ಷಿಕೆಯನ್ನು ಟ್ಯಾಕ್ಸ್ ಇನ್‌ವಾಯ್ಸ್‌ನಿಂದ ಬಿಲ್ ಆಫ್ ಸಪ್ಲೈಗೆ ಬದಲಾಯಿಸಲಾಗುತ್ತಿತ್ತು.

ಈಗ ಸೇಲ್ಸ್ ಇನ್‌ವಾಯ್ಸ್ ಶೀರ್ಷಿಕೆಯು ಬ್ರೌಸರ್‌ನಿಂದ ಡೌನ್‌ಲೋಡ್ ಮಾಡಿದ ನಂತರವೂ ಟ್ಯಾಕ್ಸ್ ಇನ್‌ವಾಯ್ಸ್‌ ಆಗಿ ಉಳಿದಿರುತ್ತದೆ.

₹ 7,00,000 ಮತ್ತು ₹ 7,27,777 ನಡುವಿನ ಟಾಕ್ಸಾಬೆಲ್  ಇನ್ಕಮ್  ಹೊಂದಿರುವ ಉದ್ಯೋಗಿಗಳಿಗೆ Marginal Tax Relief

ಈಗ New Tax Regime ಆಯ್ಕೆ ಮಾಡಿಕೊಂಡಿರುವ ಹಾಗು ₹ 7,00,000 ಮತ್ತು ₹ 7,27,777 ರ ನಡುವಿನ ಟಾಕ್ಸಾಬೆಲ್  ಇನ್ಕಮ್  ಹೊಂದಿರುವ ಉದ್ಯೋಗಿಗಳಿಗೆ ಮಾತ್ರ Marginal Tax Relief ಅನ್ವಯಿಸುತ್ತದೆ.

ಸಬ್ ಗ್ರೂಪ್ ಅಡಿಯಲ್ಲಿ ರಚಿಸಲಾದ ಲೆಡ್ಜರ್‌ ಹೊಂದಿರುವ ಇನ್ವಾಯ್ಸ್ ನಲ್ಲಿ  GCC VAT ವಿವರಗಳು

ನೀವು  ಫಿಕ್ಸೆಡ್ ಅಸೆಟ್ಸ್ ಗಳಂತಹ ಸಬ್ ಗ್ರೂಪ್ ನ ಅಡಿಯಲ್ಲಿ ರಚಿಸಲಾದ ಲೆಡ್ಜರ್ ಅನ್ನು ಬಳಸಿದಾಗ, GCC VAT ವಿವರಗಳನ್ನು ಉಳಿಸಿಕೊಳ್ಳಲಾಗುತ್ತಿರಲಿಲ್ಲ.

ಲೆಡ್ಜರ್ ಮತ್ತು ಅದರ ಸಬ್ ಗ್ರೂಪ ನ್ನು ಲೆಕ್ಕಿಸದೆಯೇ, GCC VAT ವಿವರಗಳನ್ನು ಉಳಿಸಿಕೊಳ್ಳುವುದರಿಂದ GCC VAT ವಿವರಗಳೊಂದಿಗೆ ಇನ್ವಾಯ್ಸ್ ರಚಿಸುವಲ್ಲಿ ನೀವು ಈಗ ಸುಗಮ ಅನುಭವವನ್ನು ಪಡೆಯುವಿರಿ.

Post a Comment

Is this information useful?
YesNo
Helpful?